Advertisement
ಮಾರು ದೂರದಲ್ಲಿ ನೂರು!ಟೆನಿಸ್ ಪಂದ್ಯಗಳ ಅಂಕಪದ್ಧತಿ ಭಿನ್ನವಾಗಿರುತ್ತದೆ. ಇಲ್ಲಿ ಗೇಮ್, ಸೆಟ್ ಮೂಲಕ ಪಂದ್ಯ ನಿರ್ಧರಿಸಲಾಗುತ್ತದೆ. ಪಂದ್ಯದ ವೇಳೆ ಇಲ್ಲಿ ಮೂರಂಕಿಯ ಪ್ರಶ್ನೆಯೇ ಬರುವುದಿಲ್ಲ. ಆದರೆ ವಿಶ್ವದ ಮಾಜಿ ನಂ.1 ಆಟಗಾರ ಫೆಡರರ್ ಈಗ 100ನೇ ಎಟಿಪಿ ಸಿಂಗಲ್ಸ್ ಪ್ರಶಸ್ತಿಗಳ ಸನಿಹದಲ್ಲಿದ್ದಾರೆ. ಇನ್ನು ಒಂದೇ ಒಂದು ಪ್ರಶಸ್ತಿ ಗೆದ್ದರೆ, 100 ಎಟಿಪಿ ಪ್ರಶಸ್ತಿ ಗಳಿಸಿದ ವಿಶ್ವದ ಎರಡನೇ ಸಾಧಕ ಎಂದು ಇತಿಹಾಸ ನಮೂದಿಸಿಕೊಳ್ಳುತ್ತದೆ. ವರ್ಷದ ಅತ್ಯುತ್ತಮ ಪ್ರದರ್ಶನ ತೋರಿದ ಎಂಟು ಜನ ಆಟಗಾರರನ್ನು ಒಳಗೊಂಡ ಎಟಿಪಿ ಫೈನಲ್ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈಗ ಲಂಡನ್‌ನಲ್ಲಿ ನಡೆದಿರುವ ಈ ಟೂರ್ನಿಯಲ್ಲಿಯೇ ರೋಜರ್ ಫೆಡರರ್ ತಮ್ಮ ನೂರನೇ ಪ್ರಶಸ್ತಿ ಪಡೆದರೆ ಅದಕ್ಕೊಂದು ಮಾಂತ್ರಿಕ ಸ್ಪರ್ಶ ಸಿಕ್ಕಂತಾಗುತ್ತದೆ.
ಫೆಡರರ್‌ರ ಸಾಮರ್ಥ್ಯ ಪ್ರಶ್ನಾತೀತವಾದುದು. ಅಷ್ಟಕ್ಕೂ 99 ಪ್ರಶಸ್ತಿ ಪಡೆದವನ ಸಾಮರ್ಥ್ಯದ ಮಾತೇ ಹಾಸ್ಯಾಸ್ಪದ. ಆಟಗಾರರ ದೈಹಿಕ ತಾಕತ್ತು ಸದಾ ಮಸೂರದಲ್ಲಿ ಹಿಡಿದು ನೋಡುವಂತಹದ್ದು. ಮೊನ್ನೆ ಆಗಸ್ಟ್‌ನಲ್ಲಿ 37ನೇ ಹುಟ್ಟುಹಬ್ಬ ಆಚರಿಸಿದ ಫೆಡರರ್‌ಗೆ ಪ್ರತಿಭೆ ಕೈಕೊಡುವುದಿಲ್ಲ. ಫಾರಂ ಕೈಬಿಡಬೇಕು ಇಲ್ಲವೇ ದೈಹಿಕ ಫಿಟ್‌ನೆಸ್. ತಮ್ಮ ದೈಹಿಕ ಸಾಮರ್ಥ್ಯವನ್ನು ಫೆಡರರ್ ಈ ವರ್ಷ 20ನೇ ಗ್ರ್ಯಾನ್‌ಸ್ಲಾéಂ ಗೆಲ್ಲುವ ಮೂಲಕ ತೋರಿದ್ದಾರೆ. ಸ್ಲಾéಮ್ ಜೊತೆಗೆ ತಮ್ಮ 36 ವರ್ಷ 10 ತಿಂಗಳ ಪ್ರಾಯದಲ್ಲಿ ವಿಶ್ವದ ಅಗ್ರಪಟ್ಟ ಏರುವ ಮೂಲಕ ರೋಜರ್ ವಿಶ್ವದ ಅತ್ಯಂತ ಹಿರಿಯ ಅಗ್ರಕ್ರಮಾಂಕಿತ ಎಂಬ ಬಿರುದನ್ನೂ ತಮ್ಮದಾಗಿಸಿಕೊಂಡರು.
Related Articles
Advertisement
ಶತಕ ಹೊಸದಲ್ಲ!ಸಿಂಗಲ್ಸ್, ಡಬಲ್ಸ್ ಎಲ್ಲ ಲೆಕ್ಕಾಚಾರಗಳನ್ನು ಪರಿಗಣಿಸಿದರೆ ಈಗಾಗಲೇ ರೋಜರ್ ಫೆಡರರ್ ಶತಕ ಬಾರಿಸಿದ್ದಾರೆ. 8 ಡಬಲ್ಸ್ ಪ್ರಶಸ್ತಿ ಕಾರಣ ಫೆಡರರ್‌ರ ಮೊತ್ತ 107ಕ್ಕೆ ಏರುತ್ತದೆ. ಹೀಗೆಯೇ ನೋಡಿದರೆ ಮಾರ್ಟಿನಾ ನವ್ರಾಟಿಲೋವಾರ 354, ಬಿಲ್ಲಿ ಜೀನ್ ಕಿಂಗ್ ಹಾಗೂ ಕ್ರಿಸ್ ಎವರ್ಟ್‌ರ 175, ಮೆಕೆನ್ರೊàರ 156, ಮಾರ್ಗರೆಟ್ ಕೋರ್ಟ್‌ರ 147, ಪಾಮ್ ]ವರ್‌ರ 128, ರೋಸ್‌ಮೇರಿ ಕ್ಯಾಸಲ್‌ರ 126, ಕಾನರ್ ಹಾಗೂ ಮೈಕ್ ಬ್ರಿಯಾನ್‌ರ 124, ಬಾಬ್ ಬ್ರಿಯಾನ್‌ರ 123 ಸಾಧನೆಗಳನ್ನು ಇಲ್ಲಿ ಉಲ್ಲೇಖೀಸಬಹುದು. ಮೈಕ್ ಬ್ರಿಯಾನ್‌ರ 124ರಲ್ಲಿ ಒಂದೇ ಒಂದು ಸಿಂಗಲ್ಸ್ ಪ್ರಶಸ್ತಿ ಇಲ್ಲ! ಕೊನೆಮಾತು
ಎಟಿಪಿ ಫೈನಲ್ಸ್‌ನಲ್ಲಿ ಫೆಡರರ್ ಆ್ಯಂಡರ್ಸನ್, ಡೊಮಿನಿಕ್ ಥೀಮ್ ಹಾಗೂ ಕೀ ನಿಶಿಕೋರಿ ಅವರ ಗುಂಪಿನಲ್ಲಿದ್ದಾರೆ. ಆ್ಯಂಡರ್ಸನ್ ವಿರುದ್ಧದ ವಿಂಬಲ್ಡನ್ ಸೋಲು ನೆನಪಲ್ಲಿದೆ. ನಿಶಿಕೋರಿ ವಿರುದ್ಧದ ಮೊದಲ ಪಂದ್ಯದಲ್ಲಿ ಫೆಡರರ್ ಸೋತೂ ಆಗಿದೆ. ರೌಂಡ್ ರಾಬಿನ್ ಮಾದರಿಯ ಟೂರ್ನಿಯಲ್ಲಿನ ರೋಜರ್ ಭವಿಷ್ಯ ಈ ಲೇಖನ ಓದುವ ವೇಳೆಗೆ ನಿಮಗೆ ನಿಚ್ಚಳಗೊಂಡಿರುತ್ತದೆ. ಫೆಡರರ್ ಕೂಡ ನರ್ವಸ್ ನೈಂಟಿಗೆ ಸಿಲುಕಿದ್ದಾರೆಯೇ ಎಂಬ ಪ್ರಶ್ನೆ ತಲೆಯಲ್ಲಿ ಸುಳಿದಾಡುತ್ತದೆ! ಮಾ.ವೆಂ.ಸ.ಪ್ರಸಾದ್, ಸಾಗರ