Advertisement
“ಈವರೆಗಿನ ಆಟದ ಪ್ರತಿಯೊಂದು ಕ್ಷಣವನ್ನೂ ನಾನು ಪ್ರೀತಿಸಿದ್ದೇನೆ. 100 ಪ್ರಶಸ್ತಿ ಗೆಲ್ಲುವ ಕನಸೀಗ ಪರಿಪೂರ್ಣಗೊಂಡಿದೆ. ದುಬಾೖನ 8ನೇ ಪ್ರಶಸ್ತಿಯೊಂದಿಗೆ 100ನೇ ಪ್ರಶಸ್ತಿ ನಂಟು ಕೂಡ ಬೆಸೆದಿರುವುದು ಸ್ಮರಣೀಯ ಕ್ಷಣ’ ಎಂಬುದಾಗಿ ಫೆಡರರ್ ಹೇಳಿದರು.
“ದುಬಾೖ ಡ್ನೂಟಿ ಫ್ರೀ ಟೆನಿಸ್’ ಪಂದ್ಯಾವಳಿಯ ಫೈನಲ್‌ನಲ್ಲಿ ರೋಜರ್ ಫೆಡರರ್ ಗ್ರೀಕ್‌ನ ಅಪಾಯಕಾರಿ ಟೆನಿಸಿಗ ಸ್ಟೆಫನಸ್ ಸಿಸಿಪಸ್ ಅವರನ್ನು 6-4, 6-4 ನೇರ ಸೆಟ್‌ಗಳಿಂದ ಸೋಲಿಸಿ 100ನೇ ಪ್ರಶಸ್ತಿಯನ್ನೆತ್ತಿ ಮೆರೆದರು. ಇದರೊಂದಿಗೆ ಕಳೆದ ಆಸ್ಟ್ರೇಲಿಯನ್ ಓಪನ್ ಟೆನಿಸ್‌ನಲ್ಲಿ ಸಿಸಿಪಸ್ ವಿರುದ್ಧ ಅನುಭವಿಸಿದ 4ನೇ ಸುತ್ತಿನ ಸೋಲಿಗೆ ಸೇಡನ್ನೂ ತೀರಿಸಿಕೊಂಡರು. ಕಳೆದ ಅಕ್ಟೋಬರ್‌ನಲ್ಲಿ ತವರಿನ ಬಾಸೆಲ್ ಕೂಟದಲ್ಲಿ ಫೆಡರರ್ 99ನೇ ಪ್ರಶಸ್ತಿ ಜಯಿಸಿದ್ದರು. ಅನಂತರದ ಪ್ಯಾರಿಸ್ ಮಾಸ್ಟರ್, ಎಟಿಪಿ ಫೈನಲ್ಸ್ ಮತ್ತು ಆಸ್ಟ್ರೇಲಿಯನ್ ಓಪನ್‌ನಲ್ಲಿ ಅವರಿಗೆ ಪ್ರಶಸ್ತಿಗಳ ಶತಕ ಬಾರಿಸುವ ಅವಕಾಶ ತಪ್ಪಿಹೋಗಿತ್ತು. ರೋಜರ್ ಫೆಡರರ್ 100 ಪ್ರಶಸ್ತಿ ಗೆದ್ದ ವಿಶ್ವದ ಕೇವಲ 2ನೇ ಸಾಧಕ. ಅಮೆರಿಕದ ಮಾಜಿ ಆಟಗಾರ ಜಿಮ್ಮಿ ಕಾನರ್ ಮೊದಲಿಗ.
Related Articles
ಆಸ್ಟ್ರೇಲಿಯದ ನಿಕ್ ಕಿರ್ಗಿಯೋಸ್ ಮತ್ತು ಚೀನದ ವಾಂಗ್ ಯೂಫಾನ್ “ಮೆಕ್ಸಿಕೊ ಓಪನ್’ ಕೂಟದ ಸಿಂಗಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
Advertisement