Advertisement

ರಾಕಿಂಗ್ ಸ್ಟಾರ್ ಬಿಡುಗಡೆ ಮಾಡಿದ ‘ಕಿಸ್’ ಹಾಡು

08:16 AM Jan 29, 2019 | Team Udayavani |

‘ಕಿಸ್’ ಚಿತ್ರದ ಎರಡನೇ ವಿಡಿಯೋ ಸಾಂಗ್ ಅನ್ನು ರಾಕಿಂಗ್ ಸ್ಟಾರ್ ಯಶ್ ಅವರು ಇತ್ತೀಚೆಗೆ ಬಿಡುಗಡೆಗೊಳಿಸಿದರು. ‘ನೀನೇ ಮೊದಲು… ನೀನೇ ಕೊನೇ…’ ಎಂಬ ರೊಮ್ಯಾಂಟಿಕ್ ಸಾಲುಗಳುಲ್ಲ ಈ ಹಾಡನ್ನು ಆಕರ್ಷವಾಗಿ ಚಿತ್ರೀಕರಿಸಲಾಗಿದೆ. ಈ ಹಾಡನ್ನು ಸೆನ್ಸೇಷನಲ್ ಗಾಯಕಿ ಶ್ರೇಯಾ ಘೋಷಾಲ್ ಅವರು ಹಾಡಿರುವುದು ವಿಶೇಷವಾಗಿದೆ.

Advertisement

ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಪುತ್ರ ಆದಿ ಹರಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಯುವ ಪ್ರತಿಭೆ ವಿರಾಟ್ ನಾಯಕ ನಟನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅವರಿಗೆ ನಾಯಕಿಯಾಗಿ ಶ್ರೀ ಲೀಲಾ ಕಾಣಿಸಿಕೊಂಡಿದ್ದಾರೆ. ವಿ. ರವಿಕುಮಾರ್ ಅವರು ರಾಷ್ಟ್ರಕೂಟ ಬ್ಯಾನರ್ ನಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಚಿತ್ರದ ಹಾಡನ್ನು ಬಿಡುಗಡೆಗೊಳಿಸಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ಅವರು ಪ್ರಾರಂಭದಲ್ಲಿ ಆದಿ ಹರಿ ಅವರ ಸಂಗೀತವನ್ನು ಪ್ರಶಂಸಿಸಿ ಅವರಿಗೆ ಗುಡ್ ಲಕ್ ಹೇಳಿದ್ರು. ಮತ್ತು ‘ಕಿಸ್’ ಚಿತ್ರಕ್ಕೆ ಶುಭವನ್ನು ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next