Advertisement
ಕಲ್ಲೊಟ್ಟೆ ಪರಿಸರದ ಈ ಚರಂಡಿಯಲ್ಲಿ ತ್ಯಾಜ್ಯ ತುಂಬಿ ಸರಾಗವಾಗಿ ನೀರು ಹರಿಯುತ್ತಿರಲಿಲ್ಲ. ಸಾರ್ವಜನಿಕರಿಗೆ ದುರ್ನಾತ ಬೀರುವು ದರೊಂದಿಗೆ ಸೊಳ್ಳೆ ಉತ್ಪತ್ತಿ ತಾಣವಾಗಿಯೂ ಮಾರ್ಪಾಡಾಗಿತ್ತು. ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಸ್ಥಳೀಯರಲ್ಲಿ ಆವರಿಸಿತ್ತು. ಈ ಕುರಿತು ಪತ್ರಿಕೆ ವರದಿ ಪ್ರಕಟಿಸಿ, ಪುರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದಿತ್ತು.ಇದೀಗ ಚರಂಡಿ ಹೂಳು, ತ್ಯಾಜ್ಯ ತೆಗೆದು ಚಪ್ಪಡಿ ಅಳವಡಿಸಿರುವುದರಿಂದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.