Advertisement

ರೋಶೆ- ಸಿಪ್ಲಾ ಕೋವಿಡ್ ಚಿಕಿತ್ಸೆಗೆ ಬಿಡುಗಡೆಗೊಳಿಸಿದೆ ಆ್ಯಂಟಿ ಬಾಡಿ ಕಾಕ್ಟೇಲ್ :

04:45 PM May 24, 2021 | Team Udayavani |

ನವ ದೆಹಲಿ : ದೇಶದಲ್ಲಿ ಕೋವಿಡ್ ಸೋಂಕಿನೆರಡನೇ ಅಲೆ ಭಾರಿ ಆತಂಕವನ್ನು ಸೃಷ್ಟಿ ಮಾಡಿರುವ ಹಿನ್ನೆಲೆಯಲ್ಲಿ ಹಾಗೂ ಕೋವಿಡ್ ಚಿಕಿತ್ಸಗೆ ಇನ್ನೂ ಸೂಕ್ತವಾದ ಔಷಧ ಯಾವುದು ಎನ್ನುವುದರ ಬಗ್ಗೆ ಗೊಂದಲವಿರುವ ನಡುವೆ  ರೋಶೆ ಆ್ಯಂಟಿ ಬಾಡಿ ಕಾಕ್ಟೇಲ್ ನ್ನು ಕೋವಿಡ್-19 ವಿರುದ್ಧ ಚಿಕಿತ್ಸೆಗೆ ಭಾರತದಲ್ಲಿ ಬಿಡುಗಡೆ ಮಾಡಿದೆ.

Advertisement

ರೋಶೆ ಆ್ಯಂಟಿ ಬಾಡಿ ಕಾಕ್ಟೇಲ್ ಪ್ರತಿ ಡೋಸ್ ಗೆ 59,750 ರೂಪಾಯಿಗೆ ಮಾರಾಟ ಮಾಡಲು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ರೋಶೆ ಇಂಡಿಯಾ ಮತ್ತು ಸಿಪ್ಲಾ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಆಗಾಗ ಮಾಸ್ಕ್ ಬದಲಿಸುತ್ತಿರಿ : ಬ್ಲ್ಯಾಕ್‌ ಫಂಗಸ್ ಹೊಡೆದೊಡಿಸಿ

ರೋಶೆ ಆ್ಯಂಟಿ ಬಾಡಿ ಕಾಕ್ಟೇಲ್ ಗಳಾದ ಕಾಸಿರಿವಿಮ್ಯಾಬ್ ಮತ್ತು ಇಮ್ಡೆವಿಮ್ಯಾಬ್ ನ ಮೊದಲ ಭಾಗ ಭಾರತದ ಮಾರುಕಟ್ಟೆಯಲ್ಲಿ ಈಗ ಲಭ್ಯವಿದ್ದು, ಜೂನ್ ಮಧ್ಯಭಾಗ ಹೊತ್ತಿಗೆ ಎರಡನೇ ಭಾಗ ಬಿಡುಗಡೆಗೊಳಿಸಿವುದಾಗಿ ಕಂಪೆನಿ ಹೇಳಿಕೊಂಡಿದೆ.

ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾಕ್ಟೇಲ್ ಗಳಾದ ಕಾಸಿರಿವಿಮ್ಯಾಬ್ ಮತ್ತು ಇಮ್ಡೆವಿಮ್ಯಾಬ್ ಗಳ ತಲಾ ಒಂದು ಲಕ್ಷ ಪ್ಯಾಕ್‌ ನಲ್ಲಿ ಇಬ್ಬರು ರೋಗಿಗಳಿಗೆ ಚಿಕಿತ್ಸೆಯನ್ನು ಒದಗಿಸಬಹುದು ಎಂದು ಕಂಪೆನಿಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

Advertisement

ಇನ್ನು, ಸಿಪ್ಲಾ ಔಷಧಿಗಳ  ವಿತರಣಾ ಸಾಮರ್ಥ್ಯವನ್ನು ದೇಶಾದ್ಯಂತ ವೃದ್ಧಿಸಿಕೊಳ್ಳುವ  ಮೂಲಕ ಉತ್ಪನ್ನವನ್ನು ವಿತರಿಸಲು ಮುಂದಾಗಿದ್ದು, ಪ್ರತಿ ರೋಗಿಯ ಡೋಸ್‌ ಗೆ ಬೆಲೆ [ಒಟ್ಟು 1,200 ಮಿಗ್ರಾಂ (600 ಮಿಗ್ರಾಂ ಕ್ಯಾಸಿರಿವಿಮಾಬ್ ಮತ್ತು 600 ಮಿಗ್ರಾಂ ಇಮ್ಡೆವಿಮಾಬ್)] ಎಲ್ಲಾ ತೆರಿಗೆಗಳನ್ನು ಸೇರಿ 59,750 ರೂ ಆಗಿರುತ್ತದೆ.

ಮಲ್ಟಿ ಡೋಸ್ ಪ್ಯಾಕ್‌ ನ ಗರಿಷ್ಠ ಬೆಲೆ  ಎಲ್ಲಾ ತೆರಿಗೆಗಳನ್ನೊಳಗೊಂಡು 1,19,500 ರೂಪಾಯಿಗಳು ಆಗುತ್ತದೆ.

ಇನ್ನು, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ಸ್ ಕಂಟ್ರೋಲ್ ಆರ್ಗನೈಸೇಶನ್ (ಸಿ ಡಿ ಎಸ್ ಸಿ ಒ) ಇತ್ತೀಚೆಗೆ ಭಾರತದಲ್ಲಿ ಆಂಟಿಬಾಡಿ ಕಾಕ್ಟೇಲ್ (ಕ್ಯಾಸಿರಿವಿಮಾಬ್ ಮತ್ತು ಇಮ್ಡೆವಿಮಾಬ್) ಗಾಗಿ ತುರ್ತು ಬಳಕೆಯ ಅಧಿಕಾರವನ್ನು (ಇಯುಎ) ಒದಗಿಸಿತ್ತು. ಇದು ಯುಎಸ್ ಮತ್ತು ಹಲವಾರು ಇಯು ದೇಶಗಳಲ್ಲಿ ತುರ್ತು ಬಳಕೆಯ ಅಧಿಕಾರವನ್ನು ಪಡೆದಿವೆ.

ಇದನ್ನೂ ಓದಿ : 2019ರ ನವೆಂಬರ್ ನಲ್ಲಿಯೇ ಚೀನಾದ WIV ನ ಸಂಶೋಧಕರು ಹಾಸ್ಪಿಟಲ್ ಕೇರ್ ಕೋರಿದ್ದರು.! : WSJ

 

Advertisement

Udayavani is now on Telegram. Click here to join our channel and stay updated with the latest news.

Next