Advertisement
ಈ ಮೂಲಕ ಬೆಂಗಳೂರಿನ ಮುಕುಟಕ್ಕೆ ವಿಶ್ವ ದರ್ಜೆಯ ಇನ್ನೊಂದು ಆಸ್ಪತ್ರೆ ಸೇರ್ಪಡೆಯಾಗಲಿದೆ ಎಂದು ಐಟಿ, ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ದುಬೈನಲ್ಲಿ ನಡೆಯುತ್ತಿರುವ “ವರ್ಲ್ಡ್ ದುಬೈ ಎಕ್ಸ್‌ಪೋ -2020′ ವಾಣಿಜ್ಯ ಮೇಳದ ಎರಡನೇ ದಿನವಾದ ಭಾನುವಾರ ಹೂಡಿಕೆದಾರರು ಮತ್ತು ಜಾಗತಿಕ ಮಟ್ಟದ ಕಂಪನಿಗಳ ಸಿಇಒಗಳ ಜತೆ ಮಾತನಾಡಿದರು.
Related Articles
Advertisement
ನಮ್ಮಲ್ಲಿ 5,500ಕ್ಕೂ ಹೆಚ್ಚು ಐಟಿ ಮತ್ತು ಐಟಿಇಎಸ್ ಕಂಪನಿಗಳು, 750 ಎಂಎನ್‌ಸಿಗಳು ಮತ್ತು 400ಕ್ಕೂ ಹೆಚ್ಚು ಫಾರ್ಚೂನ್-500 ಸ್ಥಾನಮಾನವನ್ನು ಹೊಂದಿರುವ ಕಂಪನಿಗಳಿವೆ. ಇವು ದೇಶದ ನಿವ್ವಳ ವರಮಾನ ಮತ್ತು ರಫ್ತು ವಹಿವಾಟಿಗೆ ಅಪಾರ ಕೊಡುಗೆ ನೀಡುತ್ತಿವೆ. ಇದನ್ನು ಮತ್ತಷ್ಟು ವಿಸ್ತರಿಸುವುದು ರಾಜ್ಯ ಸರಕಾರದ ಸಂಕಲ್ಪವಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.
ಕೆಇಎಫ್, ಆಸ್ಟರ್ ಸಮೂಹಗಳ ಆಸಕ್ತಿ: ಅಶ್ವತ್ಥ ನಾರಾಯಣ ಅವರು, ಕೆಇಎಫ್ ಉದ್ಯಮ ಸಮೂಹದ ಮುಖ್ಯಸ್ಥ ಫೈಜಲ್ ಕೊಟ್ಟಿಕೊಲ್ಲಾನ್, ಆಸ್ಟರ್ ಹೆಲ್ತ್ ಕೇರ್ ಸಮೂಹದ ಮುಖ್ಯಸ್ಥ ಆಜಾದ್ ಮೂಪೇನ್ ಸೇರಿದಂತೆ ಹಲವರನ್ನು ರಾಜ್ಯ ದಲ್ಲಿ ಹೂಡಿಕೆ ಮಾಡುವಂತೆ ಆಮಂತ್ರಿಸಿದರು. ಫೈಜಲ್ ಅವರು ಕೇರಳದಲ್ಲಿ ಗ್ರಾಮೀಣ ಶಾಲೆಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲು ರೂಪಿ ಸಿರುವ “ಪ್ರಿಸಂ’ ಯೋಜನೆಯನ್ನು ಕರ್ನಾಟಕದಲ್ಲೂ ಅಳವಡಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಸಚಿವರು ವಿಚಾರ ವಿನಿಮಯ ಮಾಡಿಕೊಂಡರು.
ಇನ್ನು ಆಜಾದ್ ಅವರೊಂದಿಗೆ ರಾಜ್ಯದ 2 ಮತ್ತು 3ನೇ ಸ್ತರದ ನಗರಗಳಲ್ಲೂ ಆಸ್ಟರ್ ಆಸ್ಪತ್ರೆಗಳನ್ನು ಸ್ಥಾಪಿಸುವ ಬಗ್ಗೆ ಚರ್ಚಿಸಿ, ಇದಕ್ಕೆ ಅಗತ್ಯವಾದ ಬೆಂಬಲವನ್ನು ಕೊಡುವ ಆಶ್ವಾಸನೆ ನೀಡಿದರು. ಹೂಡಿಕೆದಾರರೊಂದಿಗೆ ನಡೆದ ಈ ಸಂವಾದದಲ್ಲಿ ರಾಜ್ಯ ಸರಕಾರದ ಸ್ಟಾರ್ಟಪ್ ವಿಷನ್ ಗ್ರೂಪಿನ ಮುಖ್ಯಸ್ಥ ಪ್ರಶಾಂತ್ ಪ್ರಕಾಶ, ಅಮನ್ ಪುರಿ ಇದ್ದರು.