ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಸಿದ್ಧಾರ್ಥ ಹೋಟೆಲ್‌ನಲ್ಲಿ ಗ್ರಾಹಕರ ಸೇವೆಗೆಂದು ವಿಶೇಷ ರೋಬೋ ತರಿಸಲಾಗಿದ್ದು, ಸೀರೆಯುಟ್ಟ ರೋಬೋ ಸುಂದರಿ ಗ್ರಾಹಕರಿಗೆ ಆಹಾರ ನೀಡಲು ಸಜ್ಜಾಗಿದೆ.
ಶಿವಮೊಗ್ಗ ಸೇರಿದಂತೆ ವಿವಿಧ ಭಾಗಗಳ ಹೋಟೆಲ್‌ಗಳಲ್ಲಿ ಇದ್ದ ರೋಬೋಟ್ ಸೇವೆ ಮೈಸೂರಿನಲ್ಲೂ ಆರಂಭವಾಗಿದ್ದು, ಜಯಚಾಮರಾಜೇಂದ್ರ ವೃತ್ತದ ಬಳಿಯಸಿದ್ಧಾರ್ಥ ಹೋಟೆಲ್‌ನಲ್ಲಿ ರೋಬೋಟ್‌ಮೂಲಕ ಆಹಾರ ಸರ್ವ್ ಮಾಡಲಾಗುತ್ತಿದೆ. ದೆಹಲಿಯಿಂದ ತಂದಿರುವರೋಬೋ ಸುಂದರಿ ಮಂಗಳವಾರದಿಂದ ಸೇವೆ ಆರಂಭಿಸಿದೆ.
ಗ್ರಾಹಕರಿಗೆ ಆಹಾರ ಸರ್ವ್ ಮಾಡುವ ರೋಬೋಟ್‌ಗಳು, ಚೆನ್ನೈ,ಹೈದರಾಬಾದ್, ಶಿವಮೊಗ್ಗ ಹೀಗೆ ದೇಶದ ಕೆಲವೇ ನಗರಗಳಲ್ಲಿ ಕಾಣಸಿ ಗುತ್ತವೆ. ಆದರೆ, ಮೈಸೂರಿನ ಹೋಟೆಲ್ ಉದ್ಯಮ ದಲ್ಲಿ ಇದು ಮೊದಲ ಪ್ರಯತ್ನವಾಗಿದೆ.
ಟೇಬಲ್ ನಂಬರ್ ಹೇಳಿದರೆ ಸಾಕು: ಈ ರೋಬೋ ಬಹುತೇಕ ಕಾರ್ಮಿಕರಂತೆಯೇ ಕಾರ್ಯ ನಿರ್ವಹಿಸಲಿದೆ. ಗ್ರಾಹಕರು ಆರ್ಡರ್ ಮಾಡಿದ ತಿಂಡಿಯನ್ನು ಸಿದ್ಧಗೊಳಿಸಿ, ರೋಬೋಟ್ ಕೈಯಲ್ಲಿ ಅಳವಡಿಸಲಾಗಿರುವ ತಟ್ಟೆ(ಟ್ರೇ)ಯ ಮೇಲೆ ಇಟ್ಟು, ಟೇಬಲ್ ಸಂಖ್ಯೆಯನ್ನು ತಿಳಿಸಿದರೆ ಕಾಂತೀಯಪಟ್ಟಿ ಮೇಲೆ ಸಾಗಿ ನಿರ್ದಿಷ್ಟ ಟೇಬಲ್ ಬಳಿ ನಿಂತುಕೊಳ್ಳುತ್ತದೆ. ಗ್ರಾಹಕರು ಟ್ರೇ ಮೇಲಿರುವ ತಿಂಡಿ ತಿನಿಸನ್ನು ತೆಗೆದುಕೊಂಡ ನಂತರ, ರೋಬೋ ನಿಗದಿತ ಸ್ಥಳಕ್ಕೆ ವಾಪಸ್ಸಾಗುತ್ತದೆ. ಟೇಬಲ್ ಸ್ವತ್ಛಗೊಳಿಸುವಾಗಲೂ ರೋಬೋ ನೆರವಾಗುತ್ತದೆ.
ಅಲ್ಲಿದ್ದ ಪ್ಲೇಟ್, ತಟ್ಟೆ, ಲೋಟ ಗಳನ್ನು ರೋಬೋ ಟ್ರೇ ಮೇಲಿಟ್ಟು ಆದೇಶ ನೀಡಿದರೆ ವಾಷಿಂಗ್ ಪ್ರದೇಶದ ಬಳಿ ಹೋಗಿ ನಿಲ್ಲುತ್ತದೆ. ಕಾರ್ಮಿಕರುಅವುಗಳನ್ನು ತೆಗೆದು ಕೊಂಡು ಸ್ವತ್ಛಗೊಳಿಸುತ್ತಾರೆ. ಸಿದ್ಧಾರ್ಥ ಹೋಟೆಲ್‌ನಲ್ಲಿರುವುದು ಧ್ವನಿ ಆದೇಶದ ಆಧಾರದಲ್ಲಿ ಕಾರ್ಯನಿರ್ವಹಿಸುವ ಯಂತ್ರವಾಗಿದೆ