Advertisement

ಸೀರೆ ಉಟ್ಟು ಬಂದ ರೋಬೊ; ಐಐಟಿ ಬಾಂಬೆಯಲ್ಲಿ ಸೋಫಿಯಾ

06:20 AM Jan 01, 2018 | Team Udayavani |

ಮುಂಬೈ: ವಿಶ್ವದಲ್ಲೇ ಪೌರತ್ವ ಪಡೆದಿರುವ ಮೊಟ್ಟ ಮೊದಲ ರೋಬೋ ಸೋಫಿಯಾ ಸೀರೆಯುಟ್ಟು ಭಾರತಕ್ಕೆ ಆಗಮಿಸಿದೆ. ಐಐಟಿ ಬಾಂಬೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ನಡೆಸಿದೆ. ಕಳೆದ ಅಕ್ಟೋಬರ್‌ನಲ್ಲಿ ಸೋಫಿಯಾಗೆ ಸೌದಿ ಅರೇಬಿಯಾ ಪೌರತ್ವ ನೀಡಿದೆ. ಪೂರ್ವ ನಿಗದಿತ ವಿಷಯಗಳ ಮೇಲೆ ಮಾತುಕತೆ ನಡೆಸುವ ಈ ರೋಬೋ, ವ್ಯಕ್ತಿಗಳ ಆಂಗಿಕ ಚಲನೆ ಹಾಗೂ ಸಂಜ್ಞೆಯನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿ ಹೊಂದಿದೆ. ಹಾಂಕಾಂಗ್‌ ಮೂಲದ ಹ್ಯಾನ್ಸನ್‌ ರೊಬೊ ಟಿಕ್ಸ್‌ ಈ ರೋಬೋವನ್ನು ನಿರ್ಮಿಸಿದ್ದು, 2015ರಲ್ಲಿ ಆಕ್ಟಿವೇಟ್‌ ಮಾಡಿದೆ.

Advertisement

ಸುಮಾರು 15 ನಿಮಿಷಗಳವರೆಗೆ ಮಾತುಕತೆ ನಡೆಸಿದ ರೋಬೋ, ನಂತರ ತಾಂತ್ರಿಕ ಕಾರಣದಿಂದ ಮೌನಕ್ಕೆ ಶರಣಾಯಿತು. ತಂತ್ರಜ್ಞರು ಸಮಸ್ಯೆ ಸರಿಪಡಿಸಿದ ನಂತರ ಮಾತುಕತೆ ಮುಂದುವರಿಸಿತು. ವಿದ್ಯಾರ್ಥಿಗಳು ಕೇಳಿದ ವಿವಿಧ ವಿಷಯಗಳ ಬಗೆಗಿನ ಪ್ರಶ್ನೆಗಳಿಗೆ ವಿವರವಾಗಿ ರೋಬೋ ಉತ್ತರಿಸಿತು. ಕೃತಕ ಬುದ್ಧಿಮತ್ತೆಯಿಂದ ಭಾರತದ ಸಂಸ್ಕೃತಿಯ ಬಗ್ಗೆಯೂ ರೋಬೋ ಮಾತನಾಡಿತು. ಅಲ್ಲದೆ ತುಂಟ ಪ್ರಶ್ನೆಗಳಿಗೂ ಉತ್ತರಿಸಿತು. ವಿದ್ಯಾರ್ಥಿಯೊಬ್ಬರು ನಾನು ನಿನ್ನನ್ನು ವಿವಾಹವಾಗಲು ಬಯಸುತ್ತೇನೆ ಎಂದು ಕೇಳಿದ್ದಕ್ಕೆ, “ನಾನು ಈ ಪ್ರಸ್ತಾಪವನ್ನು ತಿರಸ್ಕರಿಸುತ್ತೇನೆ. ಮೆಚ್ಚುಗೆಗೆ ಧನ್ಯವಾದಗಳು’ ಎಂದು ಸೋಫಿಯಾ ಉತ್ತರಿಸಿದಳು.

Advertisement

Udayavani is now on Telegram. Click here to join our channel and stay updated with the latest news.

Next