Advertisement

ಚರ್ಚಾ ಸ್ಪರ್ಧೆಗೆ ರೋಬೋ

12:30 AM Feb 15, 2019 | Team Udayavani |

ಸ್ಯಾನ್‌ಫ್ರಾನ್ಸಿಸ್ಕೋ: ಮನುಷ್ಯದ ಭೌತಿಕ ಮತ್ತು ಮಾನಸಿಕ ಮಿತಿಯನ್ನೂ ಮೀರಿದ ಕೆಲಸಗಳನ್ನು ಮಾಡುವಲ್ಲಿ ಕೃತಕ ಬುದ್ಧಿ ಮತ್ತೆಯುಳ್ಳ ರೋಬೋಗಳು ಯಶಸ್ವಿಯಾಗಿವೆ. ಆದರೆ, ಅವು ಚರ್ಚೆಗಳಲ್ಲೂ ಮನುಷ್ಯರನ್ನು ಸೋಲಿಸಬಲ್ಲವೇ? ಇಂಥ ಪ್ರಶ್ನೆಯನ್ನಿಟ್ಟುಕೊಂಡು ರೋಬೋಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನ ನಡೆದಿವೆ. ಇನ್ನೂ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಖ್ಯಾತ ಐಟಿ ಕಂಪೆನಿಯಾದ ಐಬಿಎಂ ಕೂಡ ಇಂಥ ಪ್ರಯತ್ನ ಮಾಡಿ, ಭಾಗಶಃ ಯಶಸ್ಸು ಕಂಡಿದೆ. 

Advertisement

ಮಿಸ್‌ ಡಿಬೇಟರ್‌ ಎಂಬ “ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌’ ಆಧರಿತ ರೋಬೋವನ್ನು ಐಬಿಎಂ ಅಭಿವೃದ್ಧಿಪಡಿಸಿದ್ದು, ಅದರ ಪ್ರಯೋಗವನ್ನು ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆಸಲಾಗಿತ್ತು. ಈ ವೇಳೆ ರೋಬೋ ಎದುರು ಚರ್ಚೆ ನಡೆಸಲು ಭಾರತೀಯ ಮೂಲದ, 2012ರ ಯುರೋಪಿಯನ್‌ ಡಿಬೇಟ್‌ನ ವಿಜೇತ ಹರೀಶ್‌ ನಟರಾಜನ್‌ ಭಾಗವಹಿಸಿದ್ದರು. ಇಲ್ಲಿ ಕೂಡ ಹರೀಶ್‌ ಜೊತೆ ಚರ್ಚೆ ನಡೆಸುವಲ್ಲಿ ರೋಬೋ ಸೋತಿದೆ. ಪ್ರೀಸ್ಕೂಲ್‌ಗ‌ಳನ್ನು ಕಡಿಮೆ ಮಾಡಬೇಕೆ ಅಥವಾ ಬೇಡವೇ ಎಂಬ ವಿಷಯದಲ್ಲಿ  4 ನಿಮಿಷ ವಾದ ಮಂಡನೆಗೆ ಹಾಗೂ ಎರಡು ನಿಮಿಷ ಸಾರಾಂಶಕ್ಕೆ ಅವಕಾಶ ನೀಡಲಾಗಿತ್ತು. ಸುಮಾರು 25 ನಿಮಿಷ ಚರ್ಚೆ ನಡೆದಿದೆ. ಸುಮಾರು 700 ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರೇಕ್ಷಕರು ಹಾಕಿದ ಮತದ ಆಧಾರದಲ್ಲಿ ಹರೀಶ್‌ ಗೆದ್ದಿದ್ದಾರೆ.   ಚರ್ಚೆ ನಡೆಸುವುದು ಇತರ ಎಲ್ಲ ಕೆಲಸಕ್ಕಿಂತ ಹೆಚ್ಚು ಸಂಕೀರ್ಣವಾದುದು. ಅದು ಯಂತ್ರಕ್ಕೆ ಕಷ್ಟ ಎಂದು ಹರೀಶ್‌ ಹೇಳಿದ್ದಾರೆ.

ಸೋಲೇ ಗೆಲುವಿನ ಸೋಪಾನ: ಕೃತಕ ಬುದ್ಧಿಮತ್ತೆಯ ಹಾದಿ  ಅಗಾಧವಾಗಿದೆ. ಐಬಿಎಂ ರೋಬೋ ಸೋತಿದ್ದು ಇದು ಆರಂಭಿಕ ವೈಫ‌ಲ್ಯವಷ್ಟೇ. ಮುಂದೆ ಈ ಕ್ಷೇತ್ರದಲ್ಲೂ ಮಾನವನನ್ನು ರೋಬೋಗಳು ಸೋಲಿಸಬಹುದು ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next