ಚೆನ್ನೈ: ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಭಾರತದ ಹಾಗೂ ತಮಿಳುನಾಡಿನ ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ವಿರುದ್ಧ ಚೆನ್ನೈ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.
Advertisement
ಅವರಿಗೆ 500 ರೂ. ದಂಡ ವಿಧಿಸುವುದರ ಜತೆಗೆ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಲಾಕ್‌ಡೌನ್ ವೇಳೆಯಲ್ಲಿ ಕಾರಿನಲ್ಲಿ ತರಕಾರಿ ಕೊಳ್ಳಲು ಬಂದಾಗ ರಾಬಿನ್ ಸಿಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದರು.
ಚೆನ್ನೈ ಲಾಕ್‌ಡೌನ್ ನಿಯಮದಂತೆ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಮನೆಯಿಂದ 2 ಕಿ.ಮೀ. ವ್ಯಾಪ್ತಿಯಲ್ಲಷ್ಟೇ ಖರೀದಿಸಬೇಕು. ಆದರೆ ವಾಹನಗಳಲ್ಲಿ ಬರುವಂತಿಲ್ಲ.