Advertisement

ವಾದ್ರಾ ಕರುಳಲ್ಲಿ ಟ್ಯೂಮರ್‌?

01:18 AM May 30, 2019 | Team Udayavani |

ಹೊಸದಿಲ್ಲಿ: ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ದೆಹಲಿ ಕೋರ್ಟ್‌ ಗೆ ಅರ್ಜಿ ಸಲ್ಲಿಸಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾರ ಪತಿ ರಾಬರ್ಟ್‌ ವಾದ್ರಾ, ತಮ್ಮ ದೊಡ್ಡ ಕರುಳಿನಲ್ಲಿ ಗೆಡ್ಡೆ ಉಂಟಾಗಿದ್ದು, ಚಿಕಿತ್ಸೆ ಪಡೆದುಕೊಳ್ಳಲು ಲಂಡನ್‌ಗೆ ತೆರಳಲೇಬೇಕಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವೈದ್ಯಕೀಯ ಪ್ರಮಾಣ ಪತ್ರವನ್ನೂ ಅವರು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಆದರೆ, ವಾದ್ರಾ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಬೇಕೇ, ಬೇಡವೇ ಎಂಬ ಕುರಿತ ಆದೇಶವನ್ನು ಕೋರ್ಟ್‌ ಜೂ.3ಕ್ಕೆ ಮುಂದೂಡಿದೆ. ಈ ನಡುವೆ, ವಿದೇಶಗಳಲ್ಲಿ ಅಕ್ರಮ ಆಸ್ತಿ ಖರೀದಿ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಬುಧವಾರ ವಾದ್ರಾಗೆ ಸಮನ್ಸ್‌ ಜಾರಿ ಮಾಡಿದೆ. ಗುರುವಾರ ಹಾಜರಾಗುವಂತೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next