Advertisement

ದರೋಡೆಗೆ ಸಂಚು: ಮೂವರು ಯುವತಿಯರ ಸೆರೆ

09:24 AM Nov 15, 2018 | Team Udayavani |

ಉಪ್ಪಿನಂಗಡಿ: ಒಂಟಿ ಪುರುಷರ ಮನೆಗೆ ನುಗ್ಗಿ ಅವರನ್ನು ಯಾಮಾರಿಸಿ ನಗ ನಗದನ್ನು ದೋಚುವ ಮೂವರು ಮಹಿಳೆಯರ ತಂಡದ ಜಾಲವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿದ್ದು, ಮಂಗಳೂರಿನ ಬಜಾಲಿನಲ್ಲಿ ದೋಚಿದ್ದ 156 ಗ್ರಾಂ ತೂಕದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. 

Advertisement

ಗದಗ ಜಿಲ್ಲೆಯ ಹಡಗಲಿ ಬೌವನೂರು ಗ್ರಾಮದ ನಿವಾಸಿ ಪವನ್‌ ರಾಜ್‌ನ ಪತ್ನಿ ದೇವಮ್ಮ (19), ಅದೇ ಗ್ರಾಮದ ಸಿದ್ದಣ್ಣ ಗೌಡ‌ರ ಮಗಳು ನಾಗಮ್ಮ ಅಲಿಯಾಸ್‌ ರೂಪಾ (18) ಮತ್ತು ಪ್ರಕಾಶ್‌ ಅಲಿಯಾಸ್‌ ಇಮ್ರಾನ್‌ನ ಪತ್ನಿ ಗೀತಾ (24) ಬಂಧಿತರು. 

ಇವರು ಅಲೆಮಾರಿ ಜನಾಂಗದವರಾಗಿದ್ದು, ಬೇರೆ ಬೇರೆ ಕಡೆ ಭಿಕ್ಷೆ ಎತ್ತುವುದು,  ಮನೆ, ತೋಟದ ಕೆಲಸಕ್ಕೆ ಹಾಜರಾಗುವುದು, ಈ ಸಂದರ್ಭದಲ್ಲಿ ತಮ್ಮತ್ತ ಆಕರ್ಷಿತರಾಗುವ  ವ್ಯಕ್ತಿಗಳ ಮನೆಗೆ ಪ್ರವೇಶಿಸಿ ಅವರನ್ನು  ದೋಚುವುದು ಇವರ ಕಸುಬು.
 
ಉಪ್ಪಿನಂಗಡಿ ದೇಗುಲದ ಪರಿಸರದಲ್ಲಿ  ಇವರು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ವಶಕ್ಕೆ ಪಡೆದು ಅವರಲ್ಲಿದ್ದ ಬ್ಯಾಗನ್ನು ಪರಿಶೀಲಿಸಿದಾಗ ಅದರಲ್ಲಿ ಚಿನ್ನದ ರೋಪ್‌ ಚೈನ್‌, 4 ಚಿನ್ನದ ಉಂಗುರಗಳು, 3 ಚಿನ್ನದ ಕಡಗಗಳು,  2 ಮೊಬೈಲ್‌,  3 ಬ್ಯಾಗ್‌ ಹಾಗೂ ಬಟ್ಟೆ ಬರೆಗಳು ಪತ್ತೆಯಾಗಿವೆ. ತನಿಖೆ ನಡೆಸಿದಾಗ, ಪತ್ತೆಯಾದ ವಸ್ತುಗಳನ್ನು ಮಂಗಳೂರಿನ ಬಜಾಲಿನ ರಿಕ್ಷಾ ಚಾಲಕರೊಬ್ಬರಿಂದ ಲೂಟಿ ಮಾಡಿದ್ದೆಂದು ಒಪ್ಪಿಕೊಂಡರು.

ಉಪ್ಪಿನಂಗಡಿಯಲ್ಲಿ ಕಲಿತವಳು
ಗುಂಪಿನಲ್ಲಿದ್ದ ಅವಿವಾಹಿತ ಯುವತಿ ತನ್ನ ವಿದ್ಯಾಭ್ಯಾಸವನ್ನು ಉಪ್ಪಿನಂಗಡಿಯ ಸರಕಾರಿ ಶಾಲೆಯಲ್ಲಿ ಪೂರೈಸಿದ್ದು, ಇಲ್ಲಿನ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ಒಂಟಿ ಪುರುಷರಿರುವ  ಶ್ರೀಮಂತ ಮನೆಯೊಂದರ ಮೇಲೆ ನಿಗಾ ಇರಿಸಿದ್ದರೆನ್ನಲಾಗಿದೆ. 

ಎಸ್‌.ಐ. ನಂದ ಕುಮಾರ್‌  ಅವರೊಂದಿಗೆ ಸಿಬಂದಿ ವರ್ಗದ  ದೇವದಾಸ್‌,  ಸಂಗಯ್ಯ ಕಾಳೆ, ಹರಿಶ್ಚಂದ್ರ, ಗಣೇಶ್‌,  ಚೋಮ, ಪ್ರತಾಪ್‌, ಜಗದೀಶ್‌, ಶ್ರೀಧರ, ಮನೋಹರ ಪಿ. ಸಿ., ಇರ್ಷಾದ್‌, ಸಚಿನ್‌, ನಾರಾಯಣ ಗೌಡ, ಯಶೋದಾ, ರೇಣುಕಾ, ನಿವೇದಿತಾ, ಪ್ರೀತಿದೀಪಾ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next