Advertisement

ಮಳವಳ್ಳಿ: ಎಟಿಎಂ ಕೇಂದ್ರಕ್ಕೆ ನುಗ್ಗಿ ದರೋಡೆ

03:31 PM Oct 21, 2020 | keerthan |

ಮಳವಳ್ಳಿ (ಮಂಡ್ಯ): ತಾಲೂಕಿನ ಬಿ.ಜಿ. ಪುರ ಗ್ರಾಮದಲ್ಲಿರುವ ಇಂಡಿ ಕ್ಯಾಶ್ ಎಟಿಎಂ ಕೇಂದ್ರಕ್ಕೆ ಕಳ್ಳರು ನುಗ್ಗಿ ಹಣ ದೋಚಿ ಪರಾರಿಯಾಗಿರುವ ಘಟನೆ ನಿನ್ನೆ ರಾತ್ರಿ ಜರುಗಿದೆ.

Advertisement

ಕಳ್ಳರು ಎಟಿಎಂ ಕೇಂದ್ರಕ್ಕೆ ನುಗ್ಗಿ, ಸಿಸಿ ಕ್ಯಾಮೆರಾ ಕಿತ್ತು ಹಾಕಿದ್ದು, ಸ್ಥಳದಲ್ಲಿ ಹಾಗೂ ಎಟಿಎಂ ಮೆಷಿನ್ ಮೇಲೆ ಕಾರದ ಪುಡಿ ಎರಚಿದ್ದಾರೆ, ಹಣ ಎಷ್ಟು ಕಳ್ಳತನವಾಗಿದೆ ಎಂದು ನಿಖರವಾಗಿ ತಿಳಿದು ಬಂದಿಲ್ಲ.

ಸ್ಥಳಕ್ಕೆ ಬೆಳಕವಾಡಿ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದು, ಕಳ್ಳತನವಾಗಿರುವ ಬಗ್ಗೆ ಕೇಸು ದಾಖಲಿಸಿಕೊಂಡು ಮುಂದಿನ ತನಿಖೆ ಕೈ ಗೊಂಡಿದ್ದಾರೆ.

ಇದನ್ನೂ ಓದಿ:ತುಳು ಚಲನಚಿತ್ರ ನಟ ಸುರೇಂದ್ರ ಬಂಟ್ವಾಳ್ ಬರ್ಬರ ಹತ್ಯೆ

Advertisement

Udayavani is now on Telegram. Click here to join our channel and stay updated with the latest news.

Next