Advertisement

ಹೆಲ್ಮೆಟ್‌ ಧರಿಸಿ ಆಸ್ಪತ್ರೆಗೆ ನುಗ್ಗಿ 4,900 ಕದ್ದ!

01:43 PM Jan 21, 2018 | |

ಕುಂದಾಪುರ: ಕುಂದಾಪುರದ ಖಾಸಗಿ ಆಸ್ಪತ್ರೆಯ ಮೆಡಿಕಲ್‌ ವಿಭಾಗದ ಕ್ಯಾಶ್‌ ಕೌಂಟರ್‌ಗೆ ಹೆಲ್ಮೆಟ್‌ ಧರಿಸಿ ನುಗ್ಗಿದ ಆಗಂತುಕನೋರ್ವ 4,900 ರೂ. ದೋಚಿ ಬೈಕ್‌ನಲ್ಲಿ ಪರಾರಿಯಾದ ಘಟನೆ ಶನಿವಾರ ಬೆಳಗ್ಗಿನ ಜಾವ 6.30ರ ಸುಮಾರಿಗೆ ಸಂಭವಿಸಿದೆ.

Advertisement

ಕೌಂಟರಿಗೆ ಕೆಲಸಕ್ಕೆ ಬಂದಿದ್ದ ಓರ್ವ ನರ್ಸ್‌ ಅಲ್ಲಿದ್ದ ಹಣ ಲೆಕ್ಕ ಮಾಡುತ್ತಿದ್ದಾಗ, ಟೇಬಲ್‌ ಹಾರಿ ಬಂದ ಕಳ್ಳ ಕಳವುಗೈದು ಪರಾರಿಯಾಗಿದ್ದಾನೆ. ಆತ ಹೆಲ್ಮೆಟ್‌ ಜತೆಗೆ ಜರ್ಕಿನ್‌ ಧರಿಸಿದ್ದು, ಬ್ಯಾಗ್‌ ಕೂಡ ಇದ್ದುದರಿಂದ ಅದರಲ್ಲೇನಾದರೂ ಮಾರಕಾಯುಧಗಳಿದ್ದೀತೆಂಬ ಭೀತಿಯಿಂದ ಆಸ್ಪತ್ರೆಯ ಸಿಬಂದಿ ಆತನ ಹತ್ತಿರಕ್ಕೆ ಸುಳಿಯಲಿಲ್ಲ.

ವೀಡಿಯೋ ವೈರಲ್‌ ಈ ಕಳವಿಗೆ ಸಂಬಂಧಿಸಿದ ವೀಡಿಯೋ ಆಸ್ಪತ್ರೆಯ ಸಿಸಿ ಕೆಮರಾದಲ್ಲಿ ದಾಖಲಾಗಿದ್ದು, ಕಳ್ಳ ಪರಾರಿಯಾಗಿರುವ ದೃಶ್ಯಗಳೂ ಅದರಲ್ಲಿವೆ. ಹೆಲ್ಮೆಟ್‌ ಧರಿಸಿರುವುದರಿಂದ ಮುಖ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ

Advertisement

Udayavani is now on Telegram. Click here to join our channel and stay updated with the latest news.

Next