Advertisement

ಬಂಟ್ವಾಳ: ಮಧ್ಯರಾತ್ರಿ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ

01:38 PM Aug 21, 2018 | Team Udayavani |

ಬಂಟ್ವಾಳ: ಮನೆಮಂದಿಯನ್ನು ಕಟ್ಟಿ  ಹಾಕಿ ಚಿನ್ನಾಭರಣಗಳನ್ನು ದರೋಡೆ ಮಾಡಿದ ಘಟನೆ ಸೋಮವಾರ ರಾತ್ರಿ ಬಂಟ್ವಾಳ ತಾಲೂಕಿನ ಅಮ್ಟಾಡಿ ಲೋರಟ್ಟೋ ಎಂಬಲ್ಲಿ ನಡೆದಿದೆ. 
ಅಮ್ಟಾಡಿ ಗ್ರಾಮದ ಲೊರೆಟ್ಟೋ ನಿವಾಸಿ ಜೇಕಬ್ ರೋಡ್ರಿಗಸ್  ಎಂಬವರ ಮನೆಗೆ ಮಧ್ಯೆ ರಾತ್ರಿಯ ವೇಳೆ ನುಗ್ಗಿದ ಕಳ್ಳರು ಈ ಕೃತ್ಯ ಎಸಗಿದ್ದಾರೆ. 

Advertisement

ರಾತ್ರಿ ಸುಮಾರು ಒಂದುವರೆ ಘಂಟೆಯ ವೇಳೆ ಜೇಕಬ್ ಅವರ ಮನೆಯ ಹಿಂಬದಿಯ ಮನೆಯ ಬಾಗಿಲಿನ ಚಿಲಕ ಮುರಿದು ಒಳ ನುಗ್ಗಿದ ಐದು ಜನ ಮುಸುಕುಧಾರಿಗಳು ಮನೆಯಲ್ಲಿದ್ದ ಜೇಕಬ್ ಮತ್ತು ಅವರ ಮಗಳು ಅಲ್ಮೀರಾ  ಅವರ ಕೈಕಾಲುಗಳನ್ನು ಕಟ್ಟಿಹಾಕಿದ್ದರು. ನಂತರ ಜೇಕಬ್ ಅವರ ಪತ್ನಿ ಗ್ರೇಟ ಅವರಲ್ಲಿ ಬಂಗಾರ ತೋರಿಸಿವಂತೆ ಹೆದರಿಸಿ ಕಪಾಟಿನಲ್ಲಿದ್ದ ಬಂಗಾರಗಳನ್ನು ದೋಚಿದ್ದಾರೆ. 

ಕಪಾಟಿನಲ್ಲಿದ್ದ ಸುಮಾರು 30 ಗ್ರಾಂನ  ಮಂಗಳಸೂತ್ರ, ನಾಲ್ಕು ಉಂಗುರ, ವಾಚು ಹಾಗೂ ಒಪೋ ಮೋಬೈಲನ್ನು ದೋಚಿದ ಘಟನೆ ನಡೆದಿದೆ. 

ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸ್ ಠಾಣೆ ಎಡಿಶನಲ್ ಎಸ್ಪಿ ವಿ.ಜೆ.ಸಜಿತ್, ಎ.ಎಸ್. ಪಿ.ಹ್ರಷಿಕೇಶ್ ಸೋನಾವಣೆ, ವೃತ ನಿರೀಕ್ಷಕ ಟಿ.ಡಿ.ನಾಗರಾಜ್, ಎಸ್.ಐ.ಗಳಾದ ಚಂದ್ರಶೇಖರ್, ಹರೀಶ್, ಪ್ರೋಬೆಸನರಿ ಪಿ.ಎಸ್.ಐ.ಸೌಮ್ಯ, ಎ.ಎಸ್.ಐ.ಸಂಜೀವ, ಹೆಚ್.ಸಿ.ಸುರೇಶ್ ಪಡಾರ್, ಸಿಬ್ಬಂದಿಗಳಾದ ಮಲಿಕ್ ಸಾಬ್, ಕುಮಾರ್, ವಿವೇಕ್, ಸುಜು, ಗೋಣಿಬಸಪ್ಪ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 

Advertisement

Udayavani is now on Telegram. Click here to join our channel and stay updated with the latest news.

Next