ಡೆಹ್ರಾಡೂನ್: ದರೋಡೆಕೋರರ ತಂಡವೊಂದು ಜುವೆಲ್ಲರಿ ಅಂಗಡಿಗೆ ದಾಳಿ ನಡೆಸಿ ಸುಮಾರು ಇಪ್ಪತ್ತು ಕೋಟಿ ಮೌಲ್ಯದ ಚಿನ್ನಾಭರಣವನ್ನು ಲೂಟಿ ಮಾಡಿರುವ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದಿದೆ.
ಬಂದೂಕು ಹಿಡಿದು ಬಂದ ದರೋಡೆಕೋರರ ತಂಡ ಡೆಹ್ರಾಡೂನ್‌ನಲ್ಲಿರುವ ರಿಲಯನ್ಸ್ ಜ್ಯುವೆಲರ್ಸ್ ಆಭರಣ ಮಳಿಗೆಗೆ ದಾಳಿ ಮಾಡಿದೆ ಈ ವೇಳೆ ಅಲ್ಲಿದ್ದ ಸಿಬಂದಿಗಳಿಗೆ ಬಂಧೂಕು ತೋರಿಸಿ ಬೆದರಿಸಿ ಚಿನ್ನಾಭರಗಳನ್ನು ಕೊಡುವಂತೆ ಬೆದರಿಸಿದ್ದಾರೆ ಬಳಿಕ ತಾವು ತಂಡ ಬ್ಯಾಗ್ ಗಳಿಗೆ ತುಂಬಿಸುವಂತೆ ಹೇಳಿಕೊಂಡಿದ್ದಾರೆ ಅದರಂತೆ ಸುಮಾರು 20 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿ ಬೈಕ್ ನಲ್ಲಿ ಪರಾರಿಯಾಗಿದ್ದಾರೆ.
ಘಟನೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡಲಾಗಿದ್ದು ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಮುಖ ರಸ್ತಗಳಲ್ಲಿ ನಾಕಾಬಂದಿ ಹಾಕಿ ವಾಹನಗಳನ್ನು ತಪಾಸಣೆ ನಡೆಸಿದ್ದಾರೆ. ಆದರೆ ದರೋಡೆಕೋರರು ಬೈಕನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಆಭರಣ ಮಳಿಗೆಯಲ್ಲಿ ದರೋಡೆಕೋರರು ಆಭರಣ ಲೂಟಿ ಮಾಡಿರುವ ದೃಶ್ಯ ಅಲ್ಲಿನ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು ಪೊಲೀಸರು ದರೋಡೆಕೋರರ ಬಂಧನಕ್ಕೆ ಬಲೆ ಬಿಸಿದ್ದಾರೆ.
ಇದನ್ನೂ ಓದಿ: Govt Super Speciality Hospital: ಆಸ್ಪತ್ರೆ ನಿರ್ಮಿಸಿ ವೈದ್ಯರ ನೇಮಿಸದ ಸರ್ಕಾರ!