Advertisement

ಮಂಗಳೂರು: ಪರ್ಸ್ ಮತ್ತು ಮೊಬೈಲ್ ಎಗರಿಸಿ ಕಳ್ಳ ಪರಾರಿ

02:28 PM Dec 11, 2021 | Team Udayavani |

ಮಂಗಳೂರು : ನಗರದ ಲಾಲ್ ಭಾಗ್ ವೃತ್ತದ ಬಳಿ ಕಳ್ಳನೊಬ್ಬ ವ್ಯಕ್ತಿಯೊಬ್ಬರ ಪರ್ಸ್ ಮತ್ತು ಮೊಬೈಲ್ ಎಗರಿಸಿ ಪರಾರಿಯಾದ ಘಟನೆ ಶನಿವಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ನಡೆದಿದೆ.

Advertisement

ಸಾರ್ವಜನಿಕರು ಬೆನ್ನಟ್ಟಿದರೂ ಕಳ್ಳನನ್ನು ಹಿಡಿಯಲು ಸಾಧ್ಯವಾಗಿಲ್ಲ. ಲಾಲ್ ಬಾಗ್ ವೃತ್ತದ ಬಳಿಯ ಸಿಸಿ ಕ್ಯಾಮೆರಾದಲ್ಲಿ ಕಳ್ಳನ ಚಹರೆ ಪತ್ತೆಯಾಗಬಹುದು. ಬಿಳಿ ಶರ್ಟ್ ಧರಿಸಿದ್ದ ಯುವಕನ ವಯಸ್ಸು ಸುಮಾರು 25 ರಿಂದ 30 ಇರಬಹುದು ಎಂದು ಹೇಳಲಾಗಿದೆ.

ಕಳ್ಳನನ್ನು ಬಿಗ್ ಬಜಾರ್ ಕಡೆಯಿಂದ ಲಾಲ್ ಬಾಗ್ ವೃತ್ತದವರೆಗೆ ಬೆನ್ನಟ್ಟಲಾಗಿದೆ ಎಂದು ತಿಳಿದು ಬಂದಿದೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next