Advertisement

ರಾಮನಗರ: ಮಾರಕಾಸ್ತ್ರ ತೋರಿಸಿ ದರೋಡೆಗೆ ಹೊಂಚು ಹಾಕುತ್ತಿದ್ದ ತಂಡ ಸೆರೆ

10:47 AM Aug 27, 2020 | sudhir |

ರಾಮನಗರ: ಮಾರಕಾಸ್ತ್ರಗಳನ್ನು ಝಳಪಿಸಿ ಹಣ, ಒಡವೆ, ದ್ವಿಚಕ್ರ ವಾಹನಗಳನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 6 ಮಂದಿ ಯುವಕರ ತಂಡವನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೈಸೂರು ಬೆಳವಾಡಿ ಅಂಚೆ ಕೂರ್ಗಹಳ್ಳಿ ನಿವಾಸಿಗಳಾದ ಕೆ. ಕೌಶಿಕ್, ವೆಂಕಟೇಶ, ಭರತ, ಮೈಸೂರು ಬೆಳವಾಡಿ ಗ್ರಾಮದ ಸ್ವೀರ್ಪ ಕಾಲೋನಿ ನಿವಾಸಿ ಎಸ್.ಜೀವನ, ಕೂರ್ಗಳ್ಳಿ ಬಳಿ ಫ‌ುಡ್‌ ಕೋರ್ಟಿನಲ್ಲಿ ಕೆಲಸಕ್ಕಿರುವ ಎಂ.ಸುಮಂತಾ, ಕೂರ್ಗಳ್ಳಿ ರಾಮಮಂದಿರದ ಮೇಗಳ ಕೊಪ್ಪದ ನಿವಾಸಿ ಸಚಿನ್‌ ಬಂಧಿತ ಆರೋಪಿಗಳು.

Advertisement

ಆ.25ರ ಬೆಳಗಿನ ಜಾವ 2 ಗಂಟೆಯಲ್ಲಿ ಜಿಲ್ಲೆಯ ಚನ್ನಪಟ್ಟಣದ ಸಂಕಲಗೆರೆ ಗೇಟ್‌ ಬಳಿಯ ಬಿ.ಎಂ.ಹೆದ್ದಾರಿ ರಸ್ತೆಯಲ್ಲಿ ಆರೋಪಿಗಳು ಕಾರಿನಲ್ಲಿ ಬಂದು ಕೈಗಳಲ್ಲಿ ಅಪಾಯಕಾರಿ ಆಯುಧಗಳನ್ನು ಹಿಡಿದು ದುಷ್ಕೃತ್ಯ ನಡೆಸಲು ಹೊಂಚು ಹಾಕುತ್ತಿದ್ದರು. ಈ ಬಗ್ಗೆ ಮಾಹಿತಿ ಬಂದ ತಕ್ಷಣ ಕಾರ್ಯಪ್ರವೃತ್ತರಾದ ಚನ್ನಪಟ್ಟಣ ಗ್ರಾಮಾಂತರ ಪಿಎಸ್ ಐ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರು, ಲಾಂಗ್, ಕಬ್ಬಿಣದ ರಾಡು, ಚಾಕು, ಮೆಣಸಿನಕಾಯಿ ಪುಡಿ ಮತ್ತು ಪ್ಲಾರ್ಸ್ಟ ವಶಕ್ಕೆ ಪಡೆದಿದ್ದಾರೆ.

ಆ.22ರ ಮಧ್ಯರಾತ್ರಿ ಚನ್ನಪಟ್ಟಣ ತಾಲೂಕು ಮತ್ತಿಕೆರೆಶೆಟ್ಟಿಹಳ್ಳಿ ರಸ್ತೆ ಯಲ್ಲಿ ನಡೆದು ಬರುತ್ತಿದ್ದ ವ್ಯಕ್ತಿ ಯೊಬ್ಬರ ಬಳಿಯಿಂದ 5520 ರೂ. ನಗದು, ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಗಳ ವಿಚಾರಣೆಯಲ್ಲಿ ಈ ಕೃತ್ಯವೆಸಗಿರುವ ಬಗ್ಗೆ ಪತ್ತೆಯಾಗಿದೆ. ಪೊಲೀಸ್‌ ಹಿರಿಯ ಅಧಿಕಾರಿಗಳು ಚನ್ನಪಟ್ಟಣ ಗ್ರಾಮಾಂತರ ಪೊಲೀಸರ ಕಾರ್ಯ ವನ್ನು ಶ್ಲಾಘಿಸಿದ್ದಾರೆ.

ಮನೆ ಬೀಗ ಮುರಿದು ನಗದು ಕಳ್ಳತನ
ಕನಕಪುರ: ಮಂಗಳವಾರ ರಾತ್ರಿ ಮನೆ ಬೀಗ ಮುರಿದಿರುವ ಖದೀಮರು ಮನೆಯಲ್ಲಿದ್ದ 35 ಸಾವಿರ ರೂ.ನಗದು ದೋಚಿ ಪರಾರಿಯಾಗಿರುವ ಘಟನೆ ನಗರದ ಟಿಎಪಿಎಂಎಸ್‌ ರಸ್ತೆಯಲ್ಲಿ ನಡೆದಿದೆ. ನಗರದ ವಾಣಿ ಚಿತ್ರಮಂದಿರದ ಪಕ್ಕದ ಟಿಎಪಿ ಸಿಎಂಎಸ್‌ ರಸ್ತೆಯ ಚೆರ್ಚ ಎದುರಿನ ಎಂ.ವಿ. ದಯಾ ನಿಧಿ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಇವರ ಪತ್ನಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಮನೆ ಮಾಲಿಕರು ಮಾವನ ಮನೆಗೆ ಹೋಗಿದ್ದರು. ಮಂಗಳ ವಾರ ರಾತ್ರಿ ಮನೆ ಬೀಗ ಮುರಿದು ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ 35 ಸಾವಿರ ರೂ.ನಗದು ದೋಚಿದ್ದಾರೆ. ಕಳ್ಳತನವಾದ ರಾತ್ರಿ ಕೂಗಳತೆ ದೂರದ ಶಕ್ತಿ ದೇವತೆ ಕೆಂಕೇರ ಮ್ಮನವರ ಗೌರಿ ಕೊಂಡೋತ್ಸವ ಮಧ್ಯರಾತ್ರಿ ವರೆಗೂ ನಡೆದಿದೆ.

ಕಳ್ಳತನವಾದ ಮನೆಯ ಮೊದ ಲನೇ ಮಹಡಿ ಯಲ್ಲಿ ಬಾಡಿಗೆಗೆ ವಾಸವಿದ್ದ ವರು ಅಗ್ನಿ ಕೊಂಡೋತ್ಸವದಲ್ಲಿ ಭಾಗಿಯಾಗಿ ರಾತ್ರಿ 2ಕ್ಕೆ ಮನೆ ಗೆ ಮರಳಿದ್ದಾರೆ. ಆವರೆ ಗೂ ಮನೆ ಯಲ್ಲಿ ಕಳ್ಳತನವಾ ಗಿರಲಿಲ್ಲ. ರಾತ್ರಿ 3ರ ನಂತರ ಕಳ್ಳತನವಾಗಿರಬ ಹುದು ಎಂದು ಮನೆ ಮಾಲಿ ಕರು ಅನುಮಾನ ವ್ಯಕ್ತಪಡಿಸಿದ್ದಾರೆ. ನಗರ ಠಾಣೆ ಎಸ್ ಐ ಲಕ್ಷ್ಮಣ ಗೌಡ ಸ್ಥಳಕ್ಕೆ ಭೇಟಿ ನೀಡಿದ್ದರು. ಶ್ವಾನದಳ, ಬೆರಳಚ್ಚು ತಜ್ಞರ ತಂಡ ಪರಿಶೀಲನೆ ನಡೆಸಿತು. ತನಿಖೆ ಮುಂದುವರಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next