Advertisement

ರಸ್ತೆ ಬದಿಯ ವಿದ್ಯುತ್‌ ಕಂಬ ಬದಲಿಸಿ ಅಪಾಯ ತಪ್ಪಿಸಿ

12:58 PM Jan 22, 2022 | Team Udayavani |

ಬಾಗೇಪಲ್ಲಿ: ಪಟ್ಟಣದ ಟಿ.ಬಿ.ಕ್ರಾಸ್‌ನ ಮುಖ್ಯರಸ್ತೆಯಲ್ಲಿರುವ 11 ಕೆ.ವಿ. ವಿದ್ಯುತ್‌ ಪರಿವರ್ತಕ ಹಾಗೂ ಕಂಬಗಳನ್ನು ಸ್ಥಳಾಂತರಿಸಿ ಸುಗಮಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದೆ.

Advertisement

ಬಾಗೇಪಲ್ಲಿ ಪಟ್ಟಣದಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಟಿ.ಬಿ. ಕ್ರಾಸ್‌ಮಾರ್ಗರಸ್ತೆಯನ್ನು ಮೇಲ್ದರ್ಜೆಗೇರಿಸಿ ದ್ವಿಪಥವಾಗಿಮಾಡಿದ್ದಾರೆ. ಬೆಂಗಳೂರು ನಗರ, ಜಿಲ್ಲಾ ಕೇಂದ್ರಚಿಕ್ಕಬಳ್ಳಾಪುರ, ಆಂಧ್ರ ಪ್ರದೇಶಕ್ಕೆ ಸಂಪರ್ಕಕಲ್ಪಿಸುವ ಮುಖ್ಯರಸ್ತೆಯಲ್ಲಿ ವಾಹನ ಸಂಚಾರದಟ್ಟಣೆ ಇರುತ್ತದೆ.

ವಾಹನ ಸಂಚಾರ ದಟ್ಟಣೆ: ಅದೇ ರೀತಿಯಲ್ಲಿ ಬೆಳಗ್ಗೆ, ಸಂಜೆ ವಾಯು ವಿಹಾರಕ್ಕೆ ತೆರಳುವ ಪಟ್ಟಣದಸಾವಿರಾರು ಜನರು ಈದ್ವಿಪಥ ರಸ್ತೆ ಯಲ್ಲೇಓಡಾಡುತ್ತಾರೆ. ದಟ್ಟ ವಾಹನ ಸಂಚಾರ ಇರುವದ್ವಿಪಥ ಮುಖರಸ್ತೆಗೆ ಅಡ್ಡಲಾಗಿ 11 ಕೆ.ವಿ. ವಿದ್ಯುತ್‌ ಕಂಬ ಮತ್ತು ಪರಿವರ್ತಕವನ್ನುಅಳವಡಿಸಿದ್ದಾರೆ.ಅವೈಜ್ಞಾನಿಕ ಅಳವಡಿಸಿರುವ ಈ ಪರಿವರ್ತಕದಪಕ್ಕದಲ್ಲೇ ಬಸ್‌, ಲಾರಿ, ಕಾರು, ಆಟೋ, ಬೃಹತ್‌ ವಾಹನಗಳ ಸಂಚಾರ ದಟ್ಟವಾಗಿದೆ.

ಅಪಘಾತ ಸಂಭವಿಸುವ ಸಾಧ್ಯತೆ: ವಿದ್ಯುತ್‌ಪರಿವರ್ತಕದ ಬಳಿ ಅಪಾಯದ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಬೆಸ್ಕಾಂ ಅಥವಾ ಲೋಕೋಪಯೋಗಿಇಲಾಖೆ ಅಧಿಕಾರಿಗಳು ಸೂಚನಾ ಫಲಕ ಅಳವಡಿಸದ ಕಾರಣ ರಾತ್ರಿ ವೇಳೆಯಲ್ಲಿಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು ಇದೆ.ಆದ್ದರಿಂದ ವಿದ್ಯುತ್‌ ಪರಿವರ್ತಕ, 11 ಕೆ.ವಿ. ವಿದ್ಯುತ್‌ ಕಂಬಗಳನ್ನು ಮುಖ್ಯರಸ್ತೆಯಿಂದ ಸ್ಥಳಾಂತರಿಸಬೇಕಿದೆ.

ಬೆಂಗಳೂರು, ಚಿಕ್ಕಬಳ್ಳಾಪುರಸೇರಿದಂತೆ ನೆರೆಯ ಆಂಧ್ರ ಪ್ರದೇಶ,ಮತ್ತಿತರೆ ಪ್ರದೇಶಗಳಿಂದ ಬಾಗೇಪಲ್ಲಿ ಕಡೆಬರುವ ಮುಖ್ಯರಸ್ತೆ ಇಳಿಜಾರು ಇರುವಕಾರಣ, ವಾಹನ ಚಾಲಕರು ಅತಿವೇಗವಾಗಿಚಲಾಯಿಸುತ್ತಾರೆ. ಮತ್ತೂಂದು ವಾಹನಅಕ್ಕಪಕ್ಕದಲ್ಲಿ ಚಲಾಯಿಸಿಕೊಂಡು ಬಂದಾಗನಿಯಂತ್ರಣ ಕಳೆದುಕೊಳ್ಳುವ ವಾಹನಸವಾರರು, ರಸ್ತೆಯ ಕೊನೆಬದಿಗೆಬರುತ್ತಿದ್ದಾರೆ. ಇದರಿಂದ ಪಾದಚಾರಿಪಥದಲ್ಲಿ ಓಡಾಡುವವರಿಗೆ ತೊಂದರೆಆಗುವುದರ ಜೊತೆಗೆ ವಿದ್ಯುತ್‌ ಕಂಬಗಳಿಗೆ ಡಿಕ್ಕಿ ಹೊಡೆದು ಅಪಾಯ ಸಂಭವಿಸುವಸಾಧ್ಯತೆ ಹೆಚ್ಚಿದೆ. ಸುರಕ್ಷಿತ ಸ್ಥಳದಲ್ಲಿ ವಿದ್ಯುತ್‌ಪರಿವರ್ತಕ ಅಳವಡಿಸಬೇಕಾಗಿದೆ. -ರವಿಕುಮಾರ್‌, ಸ್ಥಳೀಯರು, ಬಾಗೇಪಲ್ಲಿ

Advertisement

ಬಾಗೇಪಲ್ಲಿ ಪಟ್ಟಣದಟಿ.ಬಿ.ಕ್ರಾಸ್‌ ಮುಖ್ಯರಸ್ತೆಬದಿಯಲ್ಲಿರುವ ನಿವೇಶನಗಳಮಾಲಿಕರು ವಿದ್ಯುತ್‌ ಕಂಬಅಳವಡಿಸಲು ಅಡ್ಡಿಪಡಿಸಿದ್ದಾರೆ.ಕಾರಣಾಂತರಗಳಿಂದ ವಿದ್ಯುತ್‌ಪರಿವರ್ತಕವನ್ನು ರಸ್ತೆ ಬದಿಯಲ್ಲಿಅಳವಡಿಸಲಾಗಿದೆ. ಮತ್ತೂಮ್ಮೆ ಸ್ಥಳ ಪರಿಶೀಲಿಸಿ ಸ್ಥಳಾಂತರ ಮಾಡಿನಾಗರಿಕರು, ವಾಹನ ಸವಾರರ ಪ್ರಾಣ ಕಾಪಾಡಬೇಕಿದೆ. – ಕೆ.ಆರ್‌.ಸೋಮಶೇಖರ್‌, ಎಇಇ, ಬೆಸ್ಕಾಂ, ಬಾಗೇಪಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next