Advertisement

ಸಹಾಯಧನಕ್ಕಾಗಿ ಬೀದಿ ವ್ಯಾಪಾರಿಗಳ ಅಲೆದಾಟ

04:58 PM Jul 05, 2021 | Team Udayavani |

ಬೆಂಗಳೂರು: ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳಆತ್ಮ ನಿರ್ಭರ್‌ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ಆರ್ಥಿಕಸಹಾಯ ಧನ ಘೋಷಣೆ ಮಾಡಿದೆ.

Advertisement

ಆದರೆ ಆಹಣವನ್ನು ಪಡೆಯಲು ಬೀದಿಬದಿ ವ್ಯಾಪಾರಿಗಳು ಬ್ಯಾಂಕ್‌ಗಳಿಗೆ ದಿನ ಪ್ರತಿ ಅಲೆದಾಟನಡೆಸುವ ಪರಿಸ್ಥಿತಿಎದುರಾಗಿದೆ.ಕೋವಿಡ್‌ ಸಂಕಷ್ಟದ ಹಿನ್ನೆಲೆಯಲ್ಲಿ ನೀಡಿರುವ ಕೇಂದ್ರದಸಹಾಯಧನ ಪಡೆಯಲು ರಾಜ್ಯದಸುಮಾರು 2.4 ಲಕ್ಷ ಬೀದಿ ಬದಿ ವ್ಯಾಪಾರಿಗಳು ಅರ್ಜಿಸಲ್ಲಿಕೆ ಮಾಡಿದ್ದರು.

ಅದರಲ್ಲಿ ಸುಮಾರು 1.2 ಲಕ್ಷಫ‌ಲಾನುಭವಿಗಳಿಗೆ ಸಹಾಯಧನ ಬಿಡುಗಡೆ ಆಗಿದೆ.ಆದರೆ ಬಿಡುಗಡೆ ಆಗಿರುವ ಆ ಹಣಪಡೆಯಲು ಆಗುತ್ತಿಲ್ಲ ಎಂಬ ಅಳಲು ಬೀದಿ ಬದಿ ವ್ಯಾಪಾರಿಗಳದ್ದಾಗಿದೆ.ಆರ್ಥಿಕ ಸಂಕÐದ ‌r ಹಿನ್ನೆಲೆಯಲ್ಲಿ ಈಗಾಗಲೇ ಕೆಲವುಬೀದಿಬದಿ ವ್ಯಾಪಾರಿಗಳು ಕೆಲವು ಬ್ಯಾಂಕ್‌ಗಳಲ್ಲಿ ಸಾಲಮಾಡಿದ್ದಾರೆ.

ಆ ಹಣದ ಸಾಲದ ಕಂತನ್ನು ಇನ್ನೂ ಸರಿಯಾಗಿ ತೀರಿಸಿಲ್ಲ. ಆ ಹಿನ್ನೆಲೆಯಲ್ಲಿಯೇ ಈಗ ಫ‌ಲಾನುಭವಿಗಳಿಗೆ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್‌ ನಿಧಿ ಯೋಜನೆಯ ಸಹಾಯ ಧನನೀಡಲು ವಿಳಂಬ ಮಾಡಲಾಗುತ್ತಿದೆ ಎಂದುಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ದೂರಿದೆ.

ಕೋವಿಡ್‌ ಸಂಕಷ್ಟದ ಹಿನ್ನೆಲೆಯಲ್ಲಿ ಬೀದಿ ಬದಿವ್ಯಾಪಾರಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಆರ್ಥಿಕ ಸಹಾಯ ನೀಡಿದೆ.ಆದರೆ ಈಗ ದೇವರು ಕೊಟ್ಟರು ಪೂಜಾರಿ ಕೊಡುತ್ತಿಲ್ಲಎನ್ನುವಂತಾಗಿದೆ ಬೀದಿ ಬದಿ ವ್ಯಾಪಾರಿಗಳ ಸ್ಥಿತಿ ಎಂದುಇಸ್ರೋ ಲೇಔಟ್‌ ನಿವಾಸಿ ಲಕ್ಷ್ಮೀ ಆರೋಪಿಸಿದರು.

Advertisement

ಆನ್‌ಲೈನ್‌ನಲ್ಲಿ ಯೋಜನೆ ಆಯ್ಕೆ ಆಗಿರುವುದರಬಗ್ಗೆ ಮಾಹಿತಿ ನೀಡುತ್ತದೆ.ಆದರೆಬ್ಯಾಂಕ್‌ಅಧಿಕಾರಿಗಳುಇನ್ನೂ ನಮ್ಮ ಬ್ಯಾಂಕ್‌ಗೆ ನಿಮ್ಮ ದಾಖಲಾತಿ ಬಂದಿಲ್ಲಎಂದು ಹೇಳುತ್ತಾರೆ ಎಂದು ದೂರಿದರು.

ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ: ಆತ್ಮನಿರ್ಭರ್‌ ನಿಧಿ ಯೋಜನೆಯಡಿ ಸಹಾಯ ಧನಕ್ಕೆಆಯ್ಕೆಯಾದ ಫ‌ಲಾನುಭವಿಗಳಿಗೆ ಹಣ ಬ್ಯಾಂಕ್‌ನಿಂದಕೈಸೇರುತ್ತಿಲ್ಲದಿರುವುದರ ಬಗ್ಗೆ ಈಗಾಗಲೇ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯಇಲಾಖೆಯ ಹಿರಿಯ ಅಧಿಕಾರಿಗಳಿಗೆ ಗಮನಕ್ಕೆ ತರಲಾಗಿದೆ ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಇ.ರಂಗಸ್ವಾಮಿಹೇಳಿದ್ದಾರೆ.

ಹಲವು ಬೀದಿ ಬದಿ ವ್ಯಾಪಾರಿಗಳು ಕೂಡ ತಮಗೆಆಗುತ್ತಿರುವ ಅನ್ಯಾಯದ ಬಗ್ಗೆ ಸಂಘದ ಗಮನಕ್ಕೆತಂದಿದ್ದಾರೆ.ಬ್ಯಾಂಕ್‌ಅಧಿಕಾರಿಗಳನಿರ್ಲಕ್ಷ Âಧೋರಣೆಬಗ್ಗೆ ಕೌಶಲ್ಯ ಮಿಷನ್‌ ಅಧಿಕಾರಿಗಳ ಗಮನಕ್ಕೆತರಲಾಗಿದೆ. ಬ್ಯಾಂಕ್‌ ಅಧಿಕಾರಿಗಳ ಜತೆಗೆ ಮಾತುಕತೆನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದುತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next