Advertisement

ರಸ್ತೆ ಪಕ್ಕ ಭೂಕುಸಿತ: ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ವಾಹನ ಸಂಚಾರ ನಿಷೇಧ

07:59 PM Jul 16, 2022 | Team Udayavani |

ಕಾರವಾರ: ಹೊನ್ನಾವರ – ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿ 69 ರಲ್ಲಿ (ಕಿ.ಮೀ.39.8 ರಲ್ಲಿ)ಸೂಳೆ ಮುರ್ಕಿ ತಿರುವಿನ ಬಳಿ ರಸ್ತೆ ಪಕ್ಕ ಭೂಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತ ದೃಷ್ಟಿಯಿಂದ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Advertisement

ಶನಿವಾರ ಸತತವಾಗಿ ಸುರಿದ‌‌ ಮಳೆಯ ಕಾರಣ , ಭೂಕುಸಿತವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಬೇಕಾಗಿದೆ. ಹೊನ್ನಾವರ ಗೇರುಸೊಪ್ಪ ಮಾರ್ಗವಾಗಿ ಶಿವಮೊಗ್ಗಗೆ ತೆರಳುವ ಬಸ್ಸುಗಳು ಹೊನ್ನಾವರ- ಚಂದಾವರ – ಕುಮಟಾ ಬಡಾಳ -ಸಿದ್ದಾಪುರ ಅಥವಾ ಕುಮಟಾ, ಕತಗಾಲ, ಶಿರಸಿ ಮಾರ್ಗವಾಗಿ ಚಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿ, ಆದೇಶ ಹೊರಡಿಸಿದ್ದಾರೆ.

ಸಂಭವಿಸಿದ ಗುಡ್ಡ ಕುಸಿತದ ಸ್ಥಳ ಕ್ಕೆ ಸಿದ್ದಾಪುರ ಪೊಲೀಸ್ ಇನ್ಸ್ ಪೆಕ್ಟರ್ ಕುಮಾರ್, ಪಿಎಸ್ ಐ ಮಹಾಂತೇಶ್ ಕುಂಬಾರ ಹಾಗೂ ಪೊಲೀಸ್ ಸಿಬ್ಬಂದಿಗಳು ಧಾವಿಸಿದ್ದು ಅಲ್ಲಿ ಅಗತ್ಯ ಕಾರ್ಯಗಳನ್ನು ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next