Advertisement
ಸುಬ್ರಹ್ಮಣ್ಯ-ಗುತ್ತಿಗಾರು-ಸೋಣಂಗೇರಿ ಹೆದ್ದಾರಿಯ ಕಲ್ಲಾಜೆ, ಮರಕತ ಬಳಿ ಯಿಂದ ನಡುಗಲ್ಲುವರೆಗೆ ಸುಮಾರು ಕಿ.ಮೀ.ನಷ್ಟು ಹೆದ್ದಾರಿ ಬದಿ ಅಪಾಯ ಕಾರಿ ಯಾಗಿ ಪರಿಣಮಿಸಿದೆ. ಹೆದ್ದಾರಿ ಬದಿಯಲ್ಲಿ ಧರೆ ಕುಸಿತಗೊಂಡಿದ್ದು, ಮರಗಳು ಅಲ್ಲಲ್ಲಿ ಸಿಲುಕಿಕೊಂಡಿವೆ.
Related Articles
Advertisement
ಕುಸಿತಗೊಂಡ ಧರೆಗಳು ಇನ್ನೂ ಕುಸಿತದ ಭೀತಿಯಲ್ಲಿದೆ. ಮರಗಳು ಕೆಲವೆಡೆ ಧರೆಯಲ್ಲೇ ಸಿಲುಕಿಕೊಂಡು ಆಗಲೋ- ಈಗಲೋ ಹೆದ್ದಾರಿಗೆ ಬೀಳಲಿದೆ ಎಂಬ ಆತಂಕ ಸೃಷ್ಟಿಸಿದೆ. ಕುಸಿತ ಭೀತಿಯ ಧರೆ, ಮರಗಳ ತೆರವಿಗೆ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದರೂ ಪರಿಹಾರ ಕಾರ್ಯ ನಡೆಸಿಲ್ಲ ಎಂಬ ದೂರು ಕೇಳಿ ಬಂದಿದೆ.
ಮುಂದಿನ ಮಳೆಗಾಲದ ಆತಂಕ
ಮುಂದಿನ ಮಳೆಗಾಲದಲ್ಲಿ ಧರೆ ನೀರಿನ ಅಂಶದಿಂದ ಕುಸಿತ ಮುಂದುವರಿದಲ್ಲಿ ಹೆದ್ದಾರಿಯೇ ಬಂದ್ ಆಗುವ ಭೀತಿ ಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಧರೆ ಕುಸಿತ ತಡೆಗೆ ಅಪಾಯಕಾರಿ ಭಾಗಗಳಲ್ಲಿ ತಡೆಗೋಡೆಯಂತಹ ಕಾಮಗಾರಿ ಅನಿವಾರ್ಯ ಎನ್ನುತ್ತಾರೆ ವಾಹನ ಸವಾರರು. ಕೂಡಲೇ ಅಪಾಯಕಾರಿ ಸ್ಥಿತಿಯಲ್ಲಿರುವ ಭಾಗದಲ್ಲಿ ಪರಿಹಾರ ಕಾರ್ಯವನ್ನು ಸಂಬಂಧಿಸಿದ ಇಲಾಖೆ ನಡೆಸಲಿ ಎಂದು ಸಾರ್ವಜನಿರು ಆಗ್ರಹಿಸಿದ್ದಾರೆ.
ವರದಿ ಸಲ್ಲಿಕೆ: ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ಬಗ್ಗೆ ವರದಿಯನ್ನು ಅರಣ್ಯ ಇಲಾಖೆಗೆ ನೀಡಿದ್ದೇವೆ. ಮುಂದಕ್ಕೆ ಅವರು ಕ್ರಮ ಕೈಗೊಳ್ಳಬೇಕಿದೆ. ಮಳೆ ಪೂರ್ಣವಾಗಿ ನಿಲ್ಲದ ಕಾರಣ ಮಣ್ಣು ಇನ್ನೂ ಸಡಿಲ ಸ್ಥಿತಿಯಲ್ಲಿದೆ. ಆದ್ದರಿಂದ ಧರೆ ಕುಸಿತವನ್ನು ಈಗ ತೆರವು ಮಾಡಲು ಸಾಧ್ಯವಿಲ್ಲ. ಮಳೆ ನಿಂತ ಕೂಡಲೇ ಪೂರಕ ಕ್ರಮ ಕೈಗೊಳ್ಳಲಾಗುವುದು. –ಪರಮೇಶ್ವರ, ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಸುಳ್ಯ