ಬಾಳೆಹೊನ್ನೂರು: ಸುಪ್ರೀಂ ಕೋರ್ಟ್ ಆದೇಶದ ಅನ್ವಯ ರಸ್ತೆ ಅಪಘಾತ ವಲಯದ ರಸ್ತೆ ಅಗಲೀಕರಣ ಅಭಿವೃದ್ಧಿಗಾಗಿ 2018-19ರಲ್ಲಿ 9 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಶೇ.60ರಷ್ಟು ಕಾಮಗಾರಿ ಮುಗಿದಿದೆ. ಕೆಲವು ಅಂಗಡಿ ಮಾಲೀಕರು ರಸ್ತೆ ಅಗಲೀಕರಣ ಕಾಮಗಾರಿಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿತ್ತು. ಲೋಕೋಪಯೋಗಿ ಇಲಾಖೆಯವರು ಬಿ.ಕಣಬೂರು ಗ್ರಾಪಂಗೆ ಪತ್ರ ಬರೆದು ಅಂಗಡಿಗಳನ್ನು ತೆರವುಗೊಳಿಸಿಕೊಡುವಂತೆ ಮನವಿಮಾಡಿದ್ದರು. ಹಲವಾರು ಬಾರಿ ಶಾಸಕರು, ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಅಭಿವೃದ್ಧಿ ಅ ಧಿಕಾರಿಗಳು ಮನವಿ ಮಾಡಿದ್ದರೂ ಕಟ್ಟಡವನ್ನು ತೆರವುಗೊಳಿಸಿರಲಿಲ್ಲ.
ಗುರುವಾರ ಬೆಳಗ್ಗೆ ಜೆಸಿಬಿಯೊಂದಿಗೆ ಬಂದ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಪಂ ಅಭಿವೃದ್ಧಿ ಅಧಿ ಕಾರಿಗಳು, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಹಾಗೂ ಪೊಲೀಸ್ ಭದ್ರತೆಯೊಂದಿಗೆ ಕಟ್ಟಡ ತೆರವು ಕಾರ್ಯಾಚರಣೆ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಕೆಲವುಅಂಗಡಿ ಮಾಲೀಕರು ಅ ಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ಕಟ್ಟಡ ತೆರವುಗೊಳಿಸಲು ಅವಕಾಶ ಕೊಡಬೇಕೆಂದು ಪಟ್ಟು ಹಿಡಿದು ಜೆಸಿಬಿಗೆ ಅಡ್ಡ ನಿಂತು ಕಾಮಗಾರಿಗೆ ತಡೆಯೊಡ್ಡಿದರು.
ಇದನ್ನೂ ಓದಿ:ಎಂಡೋಸ್ಕೋಪಿ ಸ್ಕಲ್ ಬೇಸ್ ಸರ್ಜರಿ ಯಶಸ್ವಿ
ಈ ಹಿನ್ನೆಲೆಯಲ್ಲಿ ಅ ಧಿಕಾರಿಗಳು ಹಾಗೂ ಗ್ರಾಪಂ ಸದಸ್ಯರು ಊರಿನ ಅಭಿವೃದ್ಧಿಗೆ ಸಹಕರಿಸಬೇಕೆಂದು ಪಟ್ಟು ಹಿಡಿದು ಕಾರ್ಯಾಚರಣೆ ಪ್ರಾರಂಭಿಸಿದರು. ಈ ಹಿಂದೆ ಬಾಳೆಹೊನ್ನೂರು ಮುಖ್ಯರಸ್ತೆಯ ಪಕ್ಕದಲ್ಲಿದ್ದ ಮುಸ್ಲಿಮರ ಶ್ರದ್ಧಾಕೇಂದ್ರವಾದ ಮಸೀದಿ ಮುಂಭಾಗವನ್ನೇ ಮುಸ್ಲಿಮರು ತೆರವು ಮಾಡಿಸಿ ಅಭಿವೃದ್ಧಿಗೆ ಸಹಕರಿಸಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿತ್ತು.
ಪೆ.8 ಮತ್ತು 9ರಂದು ಗ್ರಾಪಂ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅ ಧಿಕಾರಿಗಳು ಅಂಗಡಿ ಮಾಲೀಕರಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಈ ಹಿನ್ನೆಲೆಯಲ್ಲಿ ಮೇಲ್ಚಾವಣಿಗೆ ಅಳವಡಿಸಿದ್ದ ಮರಮುಟ್ಟುಗಳು, ಸಿಮೆಂಟ್ ಶೀಟ್, ಹಾಗೂ ಹೆಂಚುಗಳು ಜೇಸಿಬಿ ಆರ್ಭಟಕ್ಕೆ ನಾಶವಾದವು. ಕಟ್ಟಡತೆರವುಗೊಳಿದ ಅಧಿ ಕಾರಿಗಳಿಗೆ ಪûಾತೀತವಾಗಿ ಸದಸ್ಯರು ಅಭಿನಂದನೆ ಸಲ್ಲಸಿದರು.