Advertisement

ಮ್ಯಾನ್‌ಹೋಲ್‌ಗೆ ರಸ್ತೆ ಅಗೆದು ಸಂಚಾರ ದುಸ್ತರ

11:05 AM May 17, 2018 | Team Udayavani |

ಮಹಾನಗರ: ಮಳೆಗಾಲ ಆರಂಭಗೊಂಡರೆ ಸಾಕು ರಸ್ತೆ ಹೊಂಡಗಳು ಸೃಷ್ಟಿಯಾಗಿ ಸಂಚಾರ ದುಸ್ತರವಾಗುವುದು ಸಹಜ. ಆದರೆ ನಗರದ ಕೊಟ್ಟಾರದಿಂದ ಕಲ್ಬಾವಿ ರಸ್ತೆಯಲ್ಲಿ ಸ್ಥಳೀಯಾಡಳಿತವೇ ಸಮಸ್ಯೆಯೊಂದನ್ನು ಸೃಷ್ಟಿಸಿದೆ. ಮ್ಯಾನ್‌ ಹೋಲ್‌ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಹಾಕಲಾಗಿದ್ದು, ಸಂಚಾರ ದುಸ್ತರವೆನಿಸಿದೆ.

Advertisement

ಮೂರು ತಿಂಗಳ ಹಿಂದೆ ರಸ್ತೆಯಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ ನಿರ್ಮಾಣಕ್ಕೆ ಸುಸ್ಥಿತಿಯಲ್ಲಿದ್ದ ರಸ್ತೆಯನ್ನು ಅಗೆದು ಹಾಕಲಾಗಿದೆ. ಕಾಮಗಾರಿ ಮುಗಿದ ಬಳಿಕ ಅಗೆದ ರಸ್ತೆಗೆ ಮತ್ತೆ ಡಾಮರು ಹಾಕಬೇಕಿದ್ದರೂ ಇಲ್ಲಿ ಹಾಗೇ ಬಿಡಲಾಗಿದೆ. ರಸ್ತೆಯ ಮಧ್ಯ ಭಾಗದಲ್ಲೇ ಈ ರೀತಿ ಅಗೆದು ಹಾಕಿರುವುದರಿಂದ ಸಂಚಾರ ತೀರಾ ದುಸ್ತರವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತು ಸ್ಥಳೀಯ ಸಾಗರ್‌ ಕೋರ್ಟ್‌ ರೆಸಿಡೆನ್ಸಿ ವೆಲ್‌ಫೇರ್‌ ಅಸೋಸಿಯೇಶನ್‌ ವತಿಯಿಂದ ಸ್ಥಳೀಯ ಕಾರ್ಪೊರೇಟರ್‌ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಅಸೋಸಿಯೇಶನ್‌ ವತಿಯಿಂದ ಮನಪಾ ಕಮಿಷನರ್‌ ಅವರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

ಮೂರು ತಿಂಗಳಿನಿಂದ ರಸ್ತೆ ಸರಿಯಿಲ್ಲದೆ ಒದ್ದಾಡುತ್ತಿದ್ದೇವೆ. ರಸ್ತೆ ಮಧ್ಯದಲ್ಲೇ ಈ ರೀತಿ ಮಾಡಿರುವುದರಿಂದ ದ್ವಿಚಕ್ರ ವಾಹನದಲ್ಲಿ ತೆರಳುವುದಕ್ಕೂ ಕಷ್ಟವಾಗುತ್ತಿದೆ. ಹೀಗಾಗಿ ಕಮಿಷನರ್‌ ಅವರಿಗೆ ದೂರು ನೀಡಲು ನಿರ್ಧರಿಸಿದ್ದೇವೆ. ಮುಂದೆ ಮಳೆಗಾಲ ಬಂದರೆ ಇನ್ನೂ ಹೆಚ್ಚಿನ ಸಮಸ್ಯೆಯಾಗಲಿದೆ ಎಂದು ಸ್ಥಳೀಯ ನಿವಾಸಿ ಚಂದ್ರಮೋಹನ್‌ ಕಲಾºವಿ ಅವರು ಆರೋಪಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next