Advertisement
ಗ್ರಾಮೀಣ ಮಟ್ಟದಲ್ಲಿ ನೀರನ್ನು ಸಂಗ್ರಹಿಸುವ ವಿಧಾನ ಹಲವು ಮಟ್ಟದಲ್ಲಿದೆ. ಆದರೆ. ನಗರೀಕರಣಕ್ಕೆ ಒಗ್ಗಿಕೊಂಡ ಪ್ರದೇಶಗಳಲ್ಲಿ ನೀರನ್ನು ಉಳಿಸುವ ಜಾಗೃತಿಗಳು ಇನ್ನೂ ಬರಬೇಕಿದೆ. ಮಳೆ ಹನಿ ನೀರು ನೇರ ಸಮುದ್ರ ಸೇರುವುದನ್ನು ತಡೆಯಬೇಕಾಗಿದೆ. ಸುಮ್ಮನೆ ಪೋಲಾಗುವ ನೀರನ್ನು ಉಳಿಸಲು ವೈಜ್ಞಾನಿಕ ಕ್ರಮದ ಕುರಿತು ಚಿಂತನೆ ನಡೆಸಬೇಕಿದೆ.
ಜಪಾನ್‌ನ ಕೆಲವೊಂದು ನಗರಗಳು ರಸ್ತೆಗೆ ಹರಿಯುವ ನೀರು ಪೋಲಾಗುತ್ತಿರುವುದನ್ನು ಕಂಡು ಅದನ್ನು ಸರಿಯಾಗಿ ಉಪಯೋಗಿಸುವ ವಿನೂತನ ಮಾರ್ಗವನ್ನು ಕಂಡು ಹಿಡಿದಿದ್ದಾರೆ. ಅದುವೇ ರೋಡ್ ಸ್ಪ್ರಿಂಕ್ಲರ್. ಇದು ರಸ್ತೆ ಮೇಲೆ ಹರಿಯುತ್ತಿರುವ ನೀರನ್ನು ತನ್ನೊಳಗೆ ಸಂಗ್ರಹಿಸಿ ಅದರಿಂದ ರಸ್ತೆಗಳಲ್ಲಿ ತೆರಳುವ ವಾಹನಗಳನ್ನು ತೊಳೆಯಲು ಬಳಸುತ್ತಾರೆ. ಮಳೆಗಾಲ ಹಾಗೂ ಬೇಸಗೆಯಲ್ಲಿ ಧೂಳು, ಕೆಸರಿನಿಂದ ಕೊಳಕಾಗುವ ವಾಹನಗಳು ಈ ಮೂಲಕ ಸ್ವಚ್ಛಗೊಳ್ಳುತ್ತವೆ. ಇದು ಮಳೆಯ ಒಂದು ಹನಿ ನೀರೂ ವ್ಯರ್ಥವಾಗದಂತೆ ತಡೆಯುತ್ತದೆ.
Related Articles
ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೊರಗಿನ ಜನರು ಮಂಗಳೂರಿಗೆ ಬಂದು ಬದುಕು ಕಟ್ಟಿಕೊಳ್ಳುತ್ತಿದ್ದಾರೆ ವೇಗವಾಗಿ ಮತ್ತು ವ್ಯವಸ್ಥಿತವಾಗಿ ಮಂಗಳೂರು ನಗರ ಬೆಳೆಯುತ್ತಿದೆ ಕೆಲವೊಂದು ಮೂಲಭೂತ ಸಮಸ್ಯೆಗಳಿಗೆ ಮಂಗಳೂರು ಜಾಗೃತವಾದರೆ ನೀರನ್ನು ಸಂಗ್ರಹಿಸುವ ರೋಡ್ ಸ್ಪಿಂಕ್ಲರ್ ಮಾದರಿಯನ್ನು ಅಳವಡಿಸಿಕೊಂಡರೆ ಸ್ವಚ್ಛ, ಸುಂದರ ಮಂಗಳೂರಿನ ಕಲ್ಪನೆಗೊಂದು ಹೊಸ ರೂಪ ಸಿಕ್ಕಂತಾಗುತ್ತದೆ. ಇದನ್ನು ವಾಹನ ತೊಳೆಯಲಷ್ಟೇ ಅಲ್ಲ ನಗರದಲ್ಲಿ ಹಸುರು ಕಾಪಾಡಲೂ ಬಳಸಿಕೊಳ್ಳಬಹುದು.
Advertisement
•ವಿಶ್ವಾಸ್ ಅಡ್ಯಾರ್