Advertisement

ಉಜಿರೆ –ಚಾರ್ಮಾಡಿ: ಹೆದ್ದಾರಿ ಬದಿಯ ಮರಗಳ ತೆರವು

01:05 AM Jul 27, 2018 | Karthik A |

ಬೆಳ್ತಂಗಡಿ: ಉಜಿರೆ-ಚಾರ್ಮಾಡಿ ಹೆದ್ದಾರಿ ಬದಿಯಲ್ಲಿದ್ದ ಅಪಾಯಕಾರಿ ಮರಗಳ ತೆರವು ಪ್ರಕ್ರಿಯೆಗೆ ಅರಣ್ಯ ಇಲಾಖೆ ಚಾಲನೆ ನೀಡಿದೆ. ಗುರುವಾರ ಮುಂಡಾಜೆ ಗ್ರಾಮದ ಸೊಮಂತ್ತಡ್ಕ ಪ್ರದೇಶದಲ್ಲಿ ಮರಗಳನ್ನು ತೆರವು ಮಾಡಲಾಗಿದೆ. ಅಪಾಯಕಾರಿ ಮರಗಳು ಹೆದ್ದಾರಿಗೆ ಬಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ‘ಹೆದ್ದಾರಿಗೆ ಬಾಗಿವೆ ಅಪಾಯಕಾರಿ ಮರಗಳು’ ಎಂಬ ಸಚಿತ್ರ ವರದಿ ಉದಯವಾಣಿ ಸುದಿನದಲ್ಲಿ  ಪ್ರಕಟಗೊಂಡಿತ್ತು. ವರದಿಗೆ ಸ್ಪಂದನೆ ಎಂಬಂತೆ ಇದೀಗ ಮರಗಳನ್ನು ತೆರವುಗೊಳಿಸಲಾಗಿದೆ.

Advertisement

ಸೊಮಂತ್ತಡ್ಕ ಜಂಕ್ಷನ್‌ ಕಾಜೂರುಕ್ರಾಸ್‌ ಬಳಿ ಹೆಬ್ಬಲಸು ಮರವನ್ನು ತೆರವುಗೊಳಿಸುವ ಸಂದರ್ಭ ಗುರುವಾರ ಸಂಜೆ ಹೆದ್ದಾರಿಯಲ್ಲಿ ಕೊಂಚ ಟ್ರಾಫಿಕ್‌ ಜಾಮ್‌ ಸಮಸ್ಯೆಯೂ ಎದುರಾಯಿತು. ಮರ ತೆರವುಗೊಂಡ ಬಳಿಕ ಸಂಚಾರ ಸುಗಮ ಸ್ಥಿತಿಗೆ ಮರಳಿತ್ತು. ಪ್ರಸ್ತುತ ಸುಮಾರು 10 ಮರಗಳನ್ನು ತೆರವುಗೊಳಸಲಾಗಿದೆಯಾದರೂ ಇನ್ನಷ್ಟು ಮರಗಳು ಹೆದ್ದಾರಿಗೆ ಬಾಗಿಕೊಂಡಿವೆ. ಮರಗಳನ್ನು ತೆರವುಗೊಳಿಸುವುದಕ್ಕೆ ಪರ ವಾನಿಗೆ ಸಿಕ್ಕಿದೆಯಾದರೂ ತಂತಿ ತೆರವು ಗೊಳಿಸದೆ ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆಯವರು ಹೇಳುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next