Advertisement

ಗೂಡಂಗಡಿ ತೆರವು ಕಾರ್ಯಾಚರಣೆ

03:12 PM Dec 10, 2019 | Suhan S |

ಹುನಗುಂದ: ಪಟ್ಟಣದಲ್ಲಿ ಬೆಳಗಾವಿ ರಾಯಚೂರು ರಾಜ್ಯ ಹೆದ್ದಾರಿ 20ರ ಅಕ್ಕಪಕ್ಕದಲ್ಲಿ ಹೆಚ್ಚುತ್ತಿರುವ ಗೂಡಂಗಡಿಗಳಿಂದ ವಾಹನ ಮತ್ತು ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಸಂಚಾರ ದಟ್ಟಣೆಯಿಂದ ಪಾದಾಚಾರಿಗಳು ರಸ್ತೆ ದಾಟಲು ಹರಸಾಹಸಪಡುವುದನ್ನು ಮನಗಂಡ ಪೊಲೀಸ್‌ ಇಲಾಖೆ ಸೋಮವಾರ ಗೂಡಂಗಡಿಗಳ ತೆರವುಗೊಳಿಸುವ ಕಾರ್ಯಾಚರಣೆಗೆ ಚಾಲನೆ ನೀಡಿತು.

Advertisement

ಪಿಎಸ್‌ಐ ಪುಂಡಲಿಕ ಪಟಾತರ ನೇತೃತ್ವದಲ್ಲಿ ರಸ್ತೆ ಬದಿಯಲ್ಲಿರುವ ಗೂಡಂಗಡಿಗಳ ತೆರವು ಕಾರ್ಯಾಚರಣೆಗೆ ಆರಂಭಗೊಂಡಿತು. ನಿತ್ಯ ಸಾವಿರಾರು ವಾಹನಗಳು ಈ ರಾಜ್ಯ ಹೆದ್ದಾರಿಯ ಮುಖಾಂತರ ಸಂಚರಿಸುತ್ತಿದ್ದು, ಈ ರಸ್ತೆಯ ಎಡಬಲದಲ್ಲಿ ಅನೇಕ ಚಿಕ್ಕ ಚಿಕ್ಕ ಅಂಗಡಿಗಳು ನಿರ್ಮಿಸಿ ಸುಗಮ ಸಂಚಾರಕ್ಕೆ ಬಹುದೊಡ್ಡ ಸಮಸ್ಯೆಯಾಗಿದೆ. ಪಟ್ಟಣ ದಾಟಲು ದೊಡ್ಡ ದೊಡ್ಡ ವಾಹನಗಳ ಸವಾರರು ಹರಸಾಹಸಪಡುವಂತಾಗಿತ್ತು. ಅಂಗಡಿ ಗಳನ್ನು ತೆರವು ಮಾಡಿ ಸುಗಮವಾಗಿ ರಸ್ತೆ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ಪಿಎಸ್‌ಐ ಪುಂಡಲಿಕ ಪಟಾತರ ಹೇಳಿದರು.

ಹವಾಲ್ದಾರ್‌ ಸಿ.ಸಿ. ಪಾಟೀಲ, ಜಿ.ಎಂ. ಪರಡಿಮಠ, ಪಿಸಿಗಳಾದ ಹನಮಂತ ಇಟಗಿ, ಎಸ್‌.ಆರ್‌. ತೊಂಡಿಹಾಳ, ಸಂಗಣ್ಣ ತುಪ್ಪದ, ಹನಮಂತ ಮೊಸಳಿ, ಸಿ.ಟಿ. ಲಮಾಣಿ ಮತ್ತು ಎಸ್‌.ಎಸ್‌.ಉತ್ನಾಳ ಇತರರು ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next