Advertisement

ರೋಡ್‌ ಶೋ, ಮತಯಾಚನೆ

08:41 PM Apr 08, 2019 | Team Udayavani |

ಕೋಟೆಕಾರು: ನೋಟು ರದ್ಧತಿಯಿಂದ ಬಡ, ಮಧ್ಯಮ, ಕೂಲಿ ಕಾರ್ಮಿಕರಿಗೆ ಸಹಿತ ನಿಷ್ಠಾವಂತರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ಸಮಾಜವನ್ನು ಲೂಟಿಗೈದವರಿಗೆ ತೊಂದರೆಯಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಬಿಜೆಪಿ ಮಂಗಳೂರು ಕ್ಷೇತ್ರದ ವತಿಯಿಂದ ತೊಕ್ಕೊಟ್ಟುವಿನಿಂದ ಕೋಟೆಕಾರುವರೆಗೆ ನಡೆಸಿದ ರೋಡ್‌ ಶೋನಲ್ಲಿ ಭಾಗವಹಿಸಿ ಬಳಿಕ ಕೋಟೆಕಾರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
Advertisement

ಮೋದಿ ಮತ್ತೂಮ್ಮೆ ಪ್ರಧಾನಿಯಾದಲ್ಲಿ ಮಾತ್ರ ದೇಶಕ್ಕೆ ಭವಿಷ್ಯವಿದೆ. ದೇಶದ ಮತದಾರರು ಪ್ರದಾನಿ ಮೋದಿಯ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಅದಕ್ಕಾಗಿ ಅಮೆರಿಕದ ಎಂಜಿನಿಯರ್‌ ಮೋದಿಗೆ ಮತ ಚಲಾಯಿಸಲು ದೇಶಕ್ಕೆ ಬರುವುದಾಗಿ ಹೇಳಿಕೊಂಡಿದ್ದಾಳೆ. ಕಳೆದ ಐದು ವರ್ಷಗಳಿಂದ ಭಾರತೀಯರಿಗೆ ವಿದೇಶದಲ್ಲಿ ವಿಶೇಷ ಗೌರವ ಸಿಗುವಂತಹ ಕೆಲಸವಾಗುತ್ತಿದೆ ಎಂದರು.

ಮಹಾಘಟಬಂಧನದಲ್ಲಿ ಪ್ರಧಾನಿ ಆಗುವುದು ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ದೇಶವನ್ನು ವರ್ಷಗಳಿಂದ ಆಳಿದ ಕಾಂಗ್ರೆಸ್ಸಿಗೆ ಉಡುಪಿಯಲ್ಲಿ ಚಿಹ್ನೆಯೇ ಇಲ್ಲದಿರುವುದು ದೃರಾದೃಷ್ಟಕರ ಎಂದರು.

ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್‌ ರೈ ಬೋಳಿಯಾರ್‌ ಮಾತನಾಡಿ, ಜಿಲ್ಲೆಯ ಅಭ್ಯರ್ಥಿ 3 ಲಕ್ಷ ಮತಗಳ ಅಂತರದಲ್ಲಿ ಈ ಬಾರಿ ಜಯಗಳಿಸಲಿದ್ದಾರೆ. ಪ್ರಧಾನಿ ಮೋದಿ ಅವರು ಜಾರಿಗೆ ತಂದಿರುವ ಯೋಜನೆಗಳು ತಳಮಟ್ಟದ ಕಾರ್ಯಕರ್ತರಿಗೆ ತಲುಪಿವೆ ಎಂದರು.

ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ, ದೇಶದ ಅಖಂಡತೆ, ಅಭಿವೃದ್ಧಿಗಾಗಿ ತ್ಯಾಗದ ಜೀವನವನ್ನು ನಡೆಸುತ್ತಿರುವ ಪ್ರಧಾನಿ ಮೋದಿಯವ ಪಕ್ಷಕ್ಕೆ ಜನ ಬೆಂಬಲಿಸಬೇಕಿದೆ ಎಂದರು.

Advertisement

ಈ ಸಂದರ್ಭ ಮುಖಂಡರಾದ ಚಂದ್ರಶೇಖರ್‌ ಉಚ್ಚಿಲ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್‌ ಕುಂಪಲ, ಚಂದ್ರ ಹಾಸ್‌ ಉಳ್ಳಾಲ್‌, ಕ್ಷೇತ್ರ ಚುನಾವಣೆ ಉಸ್ತುವಾರಿ ರಾಧಾಕೃಷ್ಣ ಬೂಡಿಯಾರು, ನಮಿತಾ ಶ್ಯಾಂ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next