Advertisement

ರಸ್ತೆ ಸುರಕ್ಷತಾ ಸಪ್ತಾಹ-ಜಾಥಾ

06:34 PM Jan 23, 2021 | Team Udayavani |

ತಾವರಗೇರಾ: ಪ್ರತಿಯೊಬ್ಬ ವಾಹನ ಸವಾರರು ಕಡ್ಡಾಯವಾಗಿ ಕಾನೂನು ನಿಯಮ ಪಾಲಿಸಬೇಕು ಹಾಗೂ ಅಗತ್ಯ ಸಂದರ್ಭಗಳಿಗಾಗಿ ಹೊಸದಾಗಿ ಬಂದಿರುವ ಕರೆ ಸಂಖ್ಯೆ 112 ಹೊಂದಿರುವ ವಾಹನವನ್ನು ಬಳಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು ಸ್ಥಳೀಯ ಪಿಎಸ್‌ಐ ಗೀತಾಂಜಲಿ ಶಿಂಧೆ ಹೇಳಿದರು.

Advertisement

ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಬೈಕ್‌ ಮೂಲಕ ಜಾಗೃತಿ ಜಾಥಾ ನಡೆಸಿದ ನಂತರ ಅವರು ಮಾತನಾಡಿದರು. ಸಾರ್ವಜನಿಕರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವ ಮೂಲಕ ತಮ್ಮ ಹಾಗೂ ತಮ್ಮ ಕುಟುಂಬದ ಸುರಕ್ಷತೆಯ ಜೊತೆಗೆ ಇನ್ನೊಬ್ಬರ ಜೀವ ಉಳಿಸಲು ಮುಂದಾಗಬೇಕು.

ಇದನ್ನೂ ಓದಿ:30ರಂದು ಚಿಕ್ಕಮಗಳೂರಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ

ಅಪಘಾತ ಮತ್ತು ಬೆಂಕಿ ಅವಘಡದಂತಹ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಇಲಾಖೆಯಿಂದ ಹೊಸದಾಗಿ ಬಂದಿರುವ ತುರ್ತು ವಾಹನ (112)ಕ್ಕೆ ಕರೆ ಮಾಡಬೇಕೆಂದು ಹೇಳಿದರು. ಎಎಸ್‌ಐಗಳಾದ ಮಲ್ಲಪ್ಪ ವಜ್ರದ, ಅತೀಕ್‌ ಅಹಮ್ಮದ್‌ ಹಾಗೂ ಪೊಲೀಸ್‌ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next