ರಾಮನಗರ: ಜನರ ಅನುಕೂಲಕ್ಕಾಗಿಯೇ ಕಾನೂನು ಇರುವುದು ಹೀಗಾಗಿ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂಬ ಕಾನೂನು ಜನತೆ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಕರೆ ನೀಡಿದರು.
ನಗರದ ಆರ್‌ಟಿಒ ಕಚೇರಿ ಆವರಣದಲ್ಲಿ ಆರ್‌ಟಿಒ ಇಲಾಖೆ ಹಮ್ಮಿಕೊಂಡಿದ್ದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟಿಸಿ ಮಾತ ನಾಡಿದಅವರು, ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಸೂಚಿತ ರೀತಿಯ ಹೆಲ್ಮೆಟ್ ಧರಿಸಿ, ವಾಹನದ ವಿಮೆ ಅವಧಿ ಮೀರದಂತೆ ಎಚ್ಚರವಹಿಸಿ ಎಂದರು.
ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದರಿಂದ ಚಾಲಕರಿಗೆ ಅಪಾಯ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು.ಈ ಸಲಹೆಗಳೆಲ್ಲ ಸಾರ್ವಜನಿಕರ ಉಪ ಯೋಗಕ್ಕಾಗಿಯೇ ಪೊಲೀಸರು ಮತ್ತು ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿ ಸೂಚನೆ ನೀಡುತ್ತಾರೆ. ಕಾನೂನು ಉಲ್ಲಂಘಿ ಸಿದರೆ ಕ್ರಮವನ್ನು ಜರುಗಿಸುತ್ತಾರೆ ಎಂದು ಎಚ್ಚರಿಸಿದರು.
ಆರ್‌ಟಿಒ ನಿರೀಕ್ಷಕ ಅಸದುಲ್ಲಾ ಬೇಗ್ ಮತ್ತು ಕೃಷ್ಣೇಗೌಡ ಅವರು ರಸ್ತೆ ಸುರಕ್ಷತೆ ಬಗ್ಗೆ ಚಾಲನೆಗೆ ಪಾಲಿಸಬೇಕಾದ ನಿಯಮ, ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾತನಾಡಿದರು. ಜಾಗೃತಿಯ ಕರ ಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ಬೈಕ್ ರ್ಯಾಲಿ: ರಾಷ್ಟ್ರೀಯ ರಸ್ತೆ ಸುರಕ್ಷತಾ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಜಾಗೃತಿ ಬೈಕ್ ರ್ಯಾಲಿಗೆ ಪ್ರಾದೇಶೀಕ ಸಾರಿಗೆ ಅಧಿಕಾರಿ ಸಿ.ಸುರೇಂದ್ರ ಚಾಲನೆ ನೀಡಿದರು. ರಾಮನಗರ ಸಬ್ ಇನ್ ಸ್ಪೆಕ್ಟರ್ ಹೇಮಂತ್ ಉಪಸ್ಥಿತರಿದ್ದರು.