Advertisement
ಅವರು ದ.ಕ. ಜಿ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Related Articles
Advertisement
ರಾ.ಹೆ. ಪ್ರಾಧಿಕಾರದ ಯೋಜನಾ ಉಪ ನಿರ್ದೇಶಕರು ಮಾತನಾಡಿ, ಬಿ.ಸಿ. ರೋಡ್ – ಸುರತ್ಕಲ್ ನಡುವಣ 34 ಕಿ.ಮೀ. ರಸ್ತೆಯಲ್ಲಿ ಗುಂಡಿ ಮುಚ್ಚುವುದು ಸೇರಿದಂತೆ ನಿರ್ವಹಣೆಗೆ 24 ಕೋ.ರೂ. ಮಂಜೂರಾಗಿದೆ. ಬಿ.ಸಿ. ರೋಡ್-ಅಡ್ಡಹೊಳೆ ಚತುಷ್ಪಥ ಕಾಮಗಾರಿಗೆ ಹೆಚ್ಚುವರಿ 47 ಎಕ್ರೆ ಭೂಸ್ವಾಧೀನ ಅಂತಿಮ ಹಂತದಲ್ಲಿದೆ. ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಶೀಘ್ರದಲ್ಲೇ ಕಾಮಗಾರಿ ಮರು ಆರಂಭಗೊಳ್ಳಲಿದೆ ಎಂದರು.
ಕುಲಶೇಖರ- ಕಾರ್ಕಳ ರಾ.ಹೆ. ಮೇಲ್ದರ್ಜೆ ಯೋಜನೆಯಲ್ಲಿ ರಸ್ತೆ ಹಾದು ಹೋಗುವ 20 ಗ್ರಾಮಗಳ ಪೈಕಿ 18ರಲ್ಲಿ ಭೂಸ್ವಾಧೀನ ಅಂತಿಮ ಹಂತದಲ್ಲಿದೆ. 2 ಗ್ರಾಮಗಳಲ್ಲಿ ನ್ಯಾಯಾಲಯದಲ್ಲಿ ದಾವೆ ಇದೆ. ಹೆದ್ದಾರಿ 45 ಮೀ. ಅಗಲಗೊಳ್ಳಲಿದೆ ಎಂದು ಅಧಿಕಾರಿ ವಿವರಿಸಿದರು.
ಮೇಲ್ಸೇತುವೆ ಡಿಸೆಂಬರ್‌ಗೆ ಪೂರ್ಣಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಡಿಸೆಂಬರ್‌ಗೆ ಪೂರ್ಣಗೊಳ್ಳಲಿದೆ ಎಂದು ನವಯುಗ ಅಧಿಕಾರಿ ತಿಳಿಸಿದರು. ನವೆಂಬರ್‌ಗೆà ಮುಗಿಸುವ ಪ್ರಯತ್ನ ನಡೆಸಬೇಕು ಎಂದು ರಾ.ಹೆ. ಪ್ರಾಧಿಕಾರ- ಬೆಂಗಳೂರು ವಿಭಾಗದ ಮಹಾಪ್ರಬಂಧಕ ಸೂರ್ಯವಂಶಿ ಸೂಚನೆ ನೀಡಿದರು. ಒಟ್ಟು 8,333 ಕಿ.ಮೀ. ಜಿ.ಪಂ. ರಸ್ತೆಗಳ ಪೈಕಿ 861 ಕಿ.ಮೀ. ಹಾನಿಯಾಗಿದ್ದು, 65 ಕೋ.ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿ.ಪಂ. ಗ್ರಾಮೀಣಾಭಿವೃದ್ಧಿ ಕಾ.ನಿ. ಎಂಜಿನಿಯರ್ ತಿಳಿಸಿದರು. ಮಳೆಯಿಂದ 943 ಕೋ.ರೂ.ಹಾನಿ
ಮಳೆಯಿಂದ 943 ಕೋ.ರೂ. ಹಾನಿ ಯಾಗಿದೆ. 1,226 ಎಕರೆ ಭತ್ತ ಮತ್ತು 1,362 ಎಕರೆ ತೋಟಗಾರಿಕೆ ಬೆಳೆ ನಾಶವಾಗಿವೆ. 949 ಮನೆಗಳಿಗೆ ಹಾನಿ ಯಾಗಿದೆ. 2,405 ಮಂದಿಗೆ ತಲಾ 10 ಸಾವಿರ ರೂ.ನಂತೆ ತಾತ್ಕಾಲಿಕ ಪರಿಹಾರ ವಿತರಿಸ ಲಾಗಿದೆ ಎಂದು ಎಡಿಸಿ ರೂಪಾ ವಿವರಿಸಿದರು. 948 ಡೆಂಗ್ಯೂ ಪ್ರಕರಣ ವರದಿ ಯಾಗಿವೆ. 11 ಮಂದಿ ಮೃತ ಪಟ್ಟಿದ್ದು, ಇಬ್ಬರು ಡೆಂಗ್ಯೂನಿಂದ ಮೃತಪಟ್ಟಿರುವುದು ಅಧಿಕೃತಗೊಂಡಿದ್ದು, 9 ಸಂಶಯಿತ ಪ್ರಕರಣ ಗಳು. 104 ಇಲಿ ಜ್ವರ ವರದಿಯಾಗಿವೆ ಎಂದು ಡಿಎಚ್‌ಒ ವಿವರಿಸಿ ದರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಸಿಇಒ ಡಾ| ಆರ್. ಸೆಲ್ವಮಣಿ, ಶಾಸಕ ಡಾ| ಭರತ್ ಶೆಟ್ಟಿ ಉಪಸ್ಥಿತರಿದ್ದರು. ಮಂಗಳೂರು ಹಾಳಾದದ್ದು ತಿಳಿಯಲಿಲ್ಲ !
ಪಚ್ಚನಾಡಿ ತ್ಯಾಜ್ಯ ರಾಶಿ ಕುಸಿತಕ್ಕೆ ಸಂಬಂಧಿಸಿ ಜಿಲ್ಲಾಡಳಿತ ಮತ್ತು ಮನಪಾ ಸಮರ್ಪಕ ಕ್ರಮ ಕೈಗೊಂಡಿಲ್ಲ. ಘಟನೆ ನಡೆದು ತಿಂಗಳು ಕಳೆದರೂ ಕಾರಣಗಳೇನು, ಯಾರಿಂದ ಲೋಪವಾಗಿದೆ ಎಂದು ತನಿಖೆ ನಡೆದಿಲ್ಲ ಎಂದು ಆಕ್ರೋಶಿಸಿದ ನಳಿನ್, ದೇಶ ಹಾಳಾಗಿದೆ ಎನ್ನುವ ನಿರ್ಗಮಿತ ಜಿಲ್ಲಾಧಿಕಾರಿಗೆ ಮಂಗಳೂರು ಹಾಳಾದದ್ದು ಗೊತ್ತಾಗಲಿಲ್ಲ ಎಂದು ಛೇಡಿಸಿದರು. 15 ದಿನಗಳೊಳಗೆ ಸಿಎಂ ಸಭೆ
ಶಿರಾಡಿ, ಚಾರ್ಮಾಡಿ ಮತ್ತು ಸಂಪಾಜೆ ಘಾಟಿಗಳಲ್ಲಿ ಭೂಕುಸಿತ ದಿಂದ ಸಂಚಾರಕ್ಕೆ ಸಮಸ್ಯೆ ಆಗುತ್ತಿರುವುದನ್ನು ಸಿಎಂ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ 15 ದಿನಗಳೊಳಗೆ ಸಭೆ ನಡೆಸಿ ಸೂಕ್ತ ಪರಿಹಾರಗಳ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ ಎಂದು ನಳಿನ್ ಹೇಳಿದರು.