Advertisement
ಕಳೆದ ಮೂರು ದಿನದಿಂದಲೂ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ನಿರಂತರವಾಗಿ ಮಳೆಯಾದ ಕಾರಣ ಮಳೆ ನೀರು ಹರಿದು ರಸ್ತೆಯ ಎರಡು ಬದಿಯಲ್ಲಿ ಹೊಂಡಗಳು ಉಂಟಾಗಿದೆ. ಈ ಹಿನ್ನೆಲೆ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಗಳನ್ನು ತಪ್ಪಲಿನ ಗೇಟ್ ನಲ್ಲಿ ನಿಲುಗಡೆ ಮಾಡಲಾಗಿದೆ.
ಇಂದು ಭಾನುವಾರವಾದ ಹಿನ್ನೆಲೆ ಮೈಸೂರು, ಬೆಂಗಳೂರು ಸೇರಿದಂತೆ ನೆರೆಯ ತಮಿಳುನಾಡು, ಕೇರಳದಿಂದ ಅಧಿಕ ಮಂದಿ ಪ್ರವಾಸಿಗರು ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ಆಗಮಿಸಿದರು. ಆದರೆ ಬೆಟ್ಟಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಿರುವ ಕಾರಣ ಭಕ್ತಾದಿಗಳು ಹಾಗೂ ಪ್ರವಾಸಿಗರು ವಿಧಿಯಿಲ್ಲದೆ ವಾಪಸ್ ತೆರಳುತ್ತಿದ್ದಾರೆ. ಇನ್ನು ಹಂಗಳ ಗ್ರಾಮದ ಪ್ರವೇಶ ದ್ವಾರದಲ್ಲಿ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿಂತು ಬಸ್ ಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ. ಮಾಹಿತಿ ಇದ್ದರೂ ಗುಂಡಿಮುಚ್ಚದ ಅಧಿಕಾರಿಗಳು:
ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಕಳೆದ ಹಲವು ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಗುಂಡಿ ಬಿದ್ದಿತ್ತು. ಇದನ್ನು ದುರಸ್ತಿ ಪಡಿಸದೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳಿದ ಹಿನ್ನೆಲೆ ಇಂದು ಅದೇ ಗುಂಡಿಗಳು ದೊಡ್ಡದಾಗಿ ಮಾರ್ಪಾಡಾಗಿದೆ. ಕಾರಣದಿಂದ ಬೆಟ್ಟಕ್ಕೆ ಬಸ್ ಸಂಚಾರ ನಿಲ್ಲಿಸಲಾಗಿದೆ ಎಂದು ಪುರಸಭೆ ಸದಸ್ಯ ರಾಜಗೋಪಾಲ್ ದೂರಿದರು.
Related Articles
Advertisement