Advertisement
ಕಾಮಗಾರಿ ತಟಸ್ಥ: ಕಳೆದಆರೇಳು ತಿಂಗಳಿನಿಂದ ಬನ್ನೇರುಘಟ್ಟದ ರಾಗೀಹಳ್ಳಿ ಗೇಟ್‌ನಿಂದ ಜಿಗಣಿವರೆಗೆ ರಸ್ತೆ ಕಾಮಗಾರಿ ಆರಂಭವಾಗಿತ್ತು. ಇದರ ನಡುವೆ ಲಾಕ್‌ಡೌನ್‌ನಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಲಾಕ್‌ಡೌನ್ ತೆರವು ಬಳಿಕ ಎಲ್ಲೆಡೆ ಕಾಮಗಾರಿಸಾಗುತ್ತಿದೆಯಾದರೂ ಇಲ್ಲಿ ಮಾತ್ರ ಕಾಮಗಾರಿತಟಸ್ಥವಾಗಿದೆ. ಇದರಿಂದ ಜಿಗಣಿ ಕೈಗಾರಿಕಾ ಪ್ರದೇಶಕ್ಕೆ ಹೋಗುವ ವಾಹನ ಸವಾರರು, ಕಾರ್ಮಿಕರು, ಆನೇಕಲ್ ಕಡೆಗೆ ಹೋಗುವ ನಾಗರಿಕರು ಬೇಗಿಹಳ್ಳಿ ಬಳಿಯ ರಸ್ತೆ ದುಸ್ಥಿತಿಯಿಂದ ಹಿಂಸೆ ಪಡುತ್ತಿದ್ದಾರೆ.
Related Articles
Advertisement
ಇನ್ನೂ ಇತ್ತೀಚಿನ ದಿನಗಳಲ್ಲಿ ಮಳೆ ಹೆಚ್ಚಾಗುತ್ತಿರುವುದರಿಂದ ರಸ್ತೆ ತುಂಬ ನೀರು ನಿಂತಿರುವುದರಿಂದ ಹಾಳಾದ ರಸ್ತೆಯಲ್ಲಿ ವಿಧಿ ಇಲ್ಲದೇ ಸಂಚರಿಸಲು ಹೋಗಿ ಪ್ರತಿನಿತ್ಯ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇವೇ. ಇನ್ನೂ ರಸ್ತೆ ಕಾಮಗಾರಿಯನ್ನು ಕೆಎಲ್‌ಆರ್‌ಡಿಸಿ (ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ) ವತಿಯಿಂದ ಮಾಡಲಾಗುತ್ತಿದೆ.
ರಸ್ತೆ ಹಾಳು, ಪ್ರಗತಿ ಮಂದಗತಿ : ವಾಹನ ಸವಾರ ಉಮೇಶ್ ಎಂಬುವರು ಉದಯವಾಣಿಗೆ ಪ್ರತಿಕ್ರಿಯಿಸಿ, ಬನ್ನೇರುಘಟ್ಟದಿಂದ ಆನೇಕಲ್ ಕಡೆಗೆ ಚಲಿಸುವಾಗ ಹಾರಗದ್ದೆಯಿಂದ ಶುರುವಾದರೆ ಬನ್ನೇರುಘಟ್ಟವರೆಗೂ ರಸ್ತೆಯಲ್ಲಿ ಸಂಚರಿಸುವುದುಕಷ್ಟ. ರಸ್ತೆಗಳು ಹಳ್ಳಕೊಳ್ಳಗಳಿಂದಕೂಡಿದ್ದು, ಮಳೆ ಬಂದರೆ ಗುಂಡಿಗಳಲ್ಲಿ ನೀರು ನಿಂತು ಸಂಚಾರ ವೇಳೆ ಪ್ರತಿ ನಿತ್ಯ ಅನೇಕ ವಾಹನ ಸವಾರರು ಬಿದ್ದು ಅಪಘಾತಗಳು ಸಂಭವಿಸುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಈ ಭಾಗದ ಶಾಸಕ ಎಂ.ಕೃಷ್ಣಪ್ಪ ನಿರ್ಲಕ್ಷ್ಯ ಮಾಡದೆ ರಸ್ತೆ ಅಭಿವೃದಿಗೆ ಒತ್ತು ನೀಡಬೇಕು. ಜಿಗಣಿ ಕೈಗಾರಿಕಾ ಪ್ರದೇಶವಾಗಿರುವುದರಿಂದ ಸಂಚಾರ ದಟ್ಟಣೆ ಇರುತ್ತದೆ. ರಸ್ತೆ ಹಾಳಾಗಿದ್ದರೂ ಮತ್ತು ಪ್ರಗತಿ ಮಂದಗತಿಯಲ್ಲಿ ನಡೆದರೂ ಶಾಸಕರು ಇತ್ತ ಗಮನ ಹರಿಸದೇ ಸಂಬಂಧ ಇಲ್ಲದಂತಿದ್ದರೆ, ನಮ್ಮಕಷ್ಟ ಹೇಳುವುದುಯಾರಿಗೆ ಎಂದು ಪ್ರಶ್ನಿಸಿದರು.
ಬನ್ನೇರುಘಟ್ಟದಿಂದ ಆನೇಕಲ್‌ವರೆಗೂ ರಸ್ತೆ ಅಗಲೀಕರಣ ಮಾಡಲು 30 ತಿಂಗಳ ಅವಧಿಯಲ್ಲಿಕೆಲಸ ಪೂರ್ಣಗೊಳಿಸಲು ಸಮಯವಿದ್ದು, ಈಗಾಗಲೇ 15 ತಿಂಗಳು ಕಳೆದಿದೆ. ಮಳೆ ಇರುವ ಕಾರಣ ಕೆಲಸ ತಡವಾಗುತ್ತಿದೆ. ರಸ್ತೆಯ ಅಗಲೀಕರಣದ ಟೆಂಡರ್ 129.89 ಕೊಟಿ ಆಗಿದೆ. ಮಳೆಕಡಿಮೆ ಆದಕೂಡಲೇಕೆಲಸ ಬೇಗನೆ ಮುಗಿಸುತ್ತೇವೆ. – ರಮೇಶ್, ಕಾರ್ಯನಿರ್ವಾಹಕ ಅಧಿಕಾರಿ, ಕೆಎಲ್‌ಆರ್‌ಡಿಸಿ
ಬನ್ನೇರುಘಟ್ಟ-ಹಾರಗದ್ದೆ ರಸ್ತೆ ಅಗಲೀಕರಣ ಮಾಡಿ ಡಬಲ್ ರಸ್ತೆನಿರ್ಮಾಣ ಮಾಡಲಾಗುತ್ತಿದ್ದು, ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಮಳೆಗಾಲದಲ್ಲಿ ಸಂಚಾರ ಮಾಡಲು ತೊಂದರೆಯಾಗಿದೆ.ಗುಂಡಿಗಳನ್ನು ಮುಚ್ಚಲುಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಬೇಗ ರಸ್ತೆಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. –ಎಂ.ಕೃಷ್ಣಪ್ಪ, ಶಾಸಕ, ಬೆಂಗಳೂರು ದಕ್ಷಿಣ
–ಮಂಜುನಾಥ ಎನ್. ಬನ್ನೇರುಘಟ್ಟ