Advertisement
ರಸ್ತೆಯ ಮೇಲೆ ಪುಟ್ಟ ಕೆರೆಯಂತೆ ಕಾಣಿಸುವ ಗುಂಡಿಗಳಿದ್ದು, ಸಿದ್ಧಗಂಗಾ ಶ್ರೀಗಳ ಜನ್ಮಸ್ಥಳ ವೀರಾಪುರ ಗ್ರಾಮಕ್ಕೂ ಇದೇ ರಸ್ತೆಯಲ್ಲೇ ಸಂಚರಿಸಬೇಕು. ಈ ಕ್ಷೇತ್ರಕ್ಕೆ ಇಬ್ಬರು ಶಾಸಕರು, ಇಬ್ಬರು ಸಂಸದರಿದ್ದರೂ, ಹಳ್ಳ-ಗುಂಡಿಗಳಿಂದ ಕೂಡಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸೋಲೂರು ಹೋಬಳಿ ಮಾಗಡಿ ತಾಲೂಕಿಗೆ ಸೇರಿದೆ. ಆದರೆ, ವಿಧಾನಸಭೆ ಚುನಾವಣೆ ನೆಲ ಮಂಗಲ ಕ್ಷೇತ್ರಕ್ಕೆ ಸೇರುತ್ತದೆ. ಲೋಕಸಭಾ ಕ್ಷೇತ್ರ ಚಿಕ್ಕಬಳ್ಳಾಪುರಕ್ಕೆ ಸೇರುತ್ತದೆ. ತಾಪಂ, ಮತ್ತು ಜಿಪಂ ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಇಂತಹ ಅತಂತ್ರ ಸ್ಥಿತಿಯಲ್ಲಿರುವ ಕಾರಣ ಎಲ್ಲರಿಂದಲೂ ಈ ಹೋಬಳಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
Related Articles
Advertisement
ರಾತ್ರಿ ವೇಳೆ ಈ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು ಕಾಣಲ್ಲ. ವಾಹನ ಗಳನ್ನು ಓಡಾಡಿಸುವುದೇ ಕಷ್ಟವಾಗಿದೆ. ಶೀಘ್ರವಾಗಿ ಗುಂಡಿ ಮುಚ್ಚಿ ವಾಹನ ಸವಾರರಿಗೆ ಅನುಕೂಲ ಮಾಡಿ ಕೊಡಬೇಕು. ●ಮೂರ್ತಿ, ಸೋಲೂರು ಗ್ರಾಮಸ್ಥ
ಇಂದು ನಾವು ಕುಂಟುಂಬ ಸಮೇತ ಮದುವೆಗೆ ಹೋಗಿ ಸೋಲೂರು ಬಳಿಯ ರೈಲ್ವೆ ಬ್ರಿಡ್ಜ್ ಬಳಿ ಬಂದಾಗ ರೈಲ್ವೆ ಬ್ರಿಡ್ಜ್ ಮೇಲೆ ಇರುವ ಗುಂಡಿಯಲ್ಲಿ ನೀರು ತುಂಬಿತ್ತು. ಬೇರೆ ಜಾಗವಿಲ್ಲದ ಕಾರಣ ನೀರಿನಲ್ಲಿ ಬರಬೇಕಾದರೆ ಇಬ್ಬರು ನೀರಿಗೆ ಬಿದ್ದು ಗಾಯಗೊಂಡಿದ್ದೇವೆ. ●ಗುರುಪ್ರಸಾದ್, ಹುಲಿಕಲ್ ಗ್ರಾಮಸ್ಥ
ರಸ್ತೆ ಸಂಪೂರ್ಣ ಹಾಳಾಗಿದೆ. ಸರಿಪಡಿಸುವ ಕೆಲಸಕ್ಕೆ ಮುಂದಾ ಗುತ್ತಿಲ್ಲ. ಪ್ರತಿನಿತ್ಯ ಒಬ್ಬರಾದರೂ ಗುಂಡಿ ಯಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ಮಳೆಗಾಲ ಆರಂಭ ವಾಗಿದೆ. ಇನ್ನಾದರೂ ಸರಿಪಡಿಸು ತ್ತಾರೆಯೋ ಕಾದು ನೋಡಬೇಕಿದೆ. ●ಸುಭಾಷ, ದ್ವಿಚಕ್ರ ವಾಹನ ಸವಾರ
-ಕೆ.ಎಸ್.ಮಂಜುನಾಥ್ ಕುದೂರು