Advertisement

ಪೈಪ್‌ಲೈನ್‌ ಕಾಮಗಾರಿಗೆ ರಸ್ತೆ ಅಗೆತ: ವಿರೋಧ

10:03 PM May 04, 2020 | Sriram |

ಗಂಗೊಳ್ಳಿ: ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಕೆಗೆ ಇಡೀ ರಸ್ತೆಯನ್ನು ಅಗೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸ್ಥಳೀಯರು ಕಾಮಗಾರಿಗೆ ತಡೆಯೊಡ್ಡಿದ ಘಟನೆ ಸೋಮವಾರ ಗುಜ್ಜಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಗುಜ್ಜಾಡಿ ಗ್ರಾಮದ ನಾಯಕವಾಡಿ ಪರಿಸರದ ಮೇಲಂಡಿ ಎಂಬಲ್ಲಿ ಗ್ರಾ.ಪಂ. 14ನೇ ಹಣಕಾಸು ಯೋಜನೆಯಡಿ ಕುಡಿ ಯುವ ನೀರಿನ ಪೈಪ್‌ಲೈನ್‌ ಅಳವಡಿಕೆಗೆ 71 ಸಾವಿರ ರೂ. ಮೀಸಲಿಡಲಾಗಿತ್ತು. ಮೇ 31ರೊಳಗೆ ಕಾಮಗಾರಿಯನ್ನು ಮುಗಿಸ ಬೇಕೆಂದು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗಿತ್ತು. ಕಾಮಗಾರಿ ಆರಂಭಿ ಸುವ ಮೊದಲು ಪಂಚಾಯತ್‌ ಗಮನಕ್ಕೆ ತರುವಂತೆ ಗುತ್ತಿಗೆದಾರರಿಗೆ ಸೂಚಿಸ ಲಾಗಿತ್ತಾದರೂ, ಗುತ್ತಿಗೆದಾರರು ಸ್ಥಳೀಯಾ ಡಳಿತದ ಗಮನಕ್ಕೆ ತಾರದೆ ಇಡೀ ರಸ್ತೆ ಅಗೆದು ಹಾಕಿರುವುದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಗುಜ್ಜಾಡಿ ಗ್ರಾ.ಪಂ. ಅಧ್ಯಕ್ಷ ತಮ್ಮಯ್ಯ ದೇವಾಡಿಗ ಮತ್ತು ಮಾಜಿ ಅಧ್ಯಕ್ಷ ಹರೀಶ ಮೇಸ್ತ, ಸ್ಥಳೀಯರ ಮನವೊಲಿಸುವ ಪ್ರಯತ್ನ ನಡೆಸಿದ್ದರೂ ಸಫಲವಾಗಲಿಲ್ಲ. ಸ್ಥಳೀಯರು ಕಾಮಗಾರಿ ಮುಂದುವರಿಸದಂತೆ ಸ್ಥಳದಲ್ಲೇ ಕುಳಿತು ಪ್ರತಿಭಟನೆ ಮುಂದುವರಿಸಿದ್ದಾರೆ. ಗ್ರಾ.ಪಂ. ಕೂಡ ಗುತ್ತಿಗೆದಾರರ ಕ್ರಮ ವನ್ನು ಖಂಡಿಸಿದ್ದು, ರಸ್ತೆಯನ್ನು ಸರಿ ಪಡಿಸಿಕೊಡುವ ಭರವಸೆ ನೀಡಿದ್ದಾರೆ. ಆದರೆ ಇದ್ಯಾವುದಕ್ಕೂ ಸ್ಥಳೀಯರು ಒಪ್ಪದಿರುವುದು ಸ್ಥಳೀಯಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ನಾಯಕವಾಡಿ ಪರಿಸರದ ಮೇಲಂಡಿ ಎಂಬಲ್ಲಿ ಸುಮಾರು 40ಕ್ಕೂ ಮಿಕ್ಕಿ ಕುಟುಂಬಗಳು ವಾಸಿಸುತ್ತಿದ್ದು, ಈ ಪರಿಸರದ ಮಣ್ಣಿನ ರಸ್ತೆಯನ್ನು ಕಾಂಕ್ರೀಟಿ ಕರಣಗೊಳಿಸಬೇಕೆಂಬ ಅನೇಕ ವರ್ಷಗಳ ಬೇಡಿಕೆಗೆ ಈವರೆಗೆ ಸ್ಪಂದನೆ ದೊರೆತಿಲ್ಲ. ಅನೇಕ ವಾಹನಗಳು, ನೂರಾರು ವಿದ್ಯಾರ್ಥಿಗಳು, ಜನರು ಈ ರಸ್ತೆ ಮೂಲಕ ಸಂಚರಿಸುತ್ತಿದ್ದು, ಮಳೆಗಾಲದಲ್ಲಿ ನೀರು ಹರಿಯುವುದಿಂದ ಸಂಚಾರ ಕಷ್ಟಕರವಾಗಿದೆ ಎನ್ನುತ್ತಾರೆ ಊರವರು.

ಪೈಪ್‌ಲೈನ್‌ ಅಳವಡಿಸಿ ಕುಡಿಯುವ ನೀರು ಪೂರೈಕೆಗೆ ನಮ್ಮ ವಿರೋಧವಿಲ್ಲ. ಆದರೆ ರಸ್ತೆಯನ್ನು ಅಗೆದು ಹಾಕಿರುವುದು ಸರಿಯಲ್ಲ. ಅಗೆದು ಹಾಕಿದ ರಸ್ತೆಯನ್ನು ಸುಸಜ್ಜಿತವಾಗಿ ಪುನರ್‌ ನಿರ್ಮಿಸಬೇಕು ಮತ್ತು ಮಳೆ ನೀರು ಈ ರಸ್ತೆಯ ಮೇಲೆ ಹರಿದು ಹೋಗದಂತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next