Advertisement

Road Mishap; ತೀರ್ಥಹಳ್ಳಿಯ ಹಿರೇಸರದಲ್ಲಿ ಹಿಟ್ ಅಂಡ್ ರನ್ನಿಗೆ ಮಹಿಳೆ ಬಲಿ !

09:37 PM Jan 27, 2024 | Team Udayavani |

ತೀರ್ಥಹಳ್ಳಿ: ತಾಲೂಕಿನ ಆರಗ ಹಿರೇಸರದ ಬಳಿ ಹಿಟ್‌ ಆ್ಯಂಡ್‌ ರನ್‌ಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.

Advertisement

ತೀರ್ಥಹಳ್ಳಿ ತಾಲೂಕು ತನಿಕಲ್‌ ಗ್ರಾಮದ ಸ್ವಾಮಿ ಎಂಬುವವರ ಪತ್ನಿ ಶುಭ (47) ಮೃತಪಟ್ಟ ಮಹಿಳೆ.

ಅವರು ತೀರ್ಥಹಳ್ಳಿಯಿಂದ ಕೋಣಂದೂರಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಹಾವೇರಿ ಮೂಲದ ಸ್ವಿಫ್ಟ್‌ ಕಾರೊಂದು ಡಿಕ್ಕಿ ಹೊಡೆದಿದೆ. ಶುಭ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಪತಿ ಸ್ವಾಮಿ ಎಂಬುವವರೂ ಕೂಡ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾವೇರಿ ಮೂಲದ ವ್ಯಕ್ತಿ ಸ್ವಿಫ್ಟ್‌ ಕಾರಲ್ಲಿ ಹಿಟ್‌ ಆ್ಯಂಡ್‌ ರನ್‌ ಮಾಡಿದ್ದು ಈತ ಪರಾರಿಯಾಗಿದ್ದ ವೇಳೆ ಕವಲೇದುರ್ಗದ ಬಳಿ ಆತನನ್ನು ಸ್ಥಳೀಯರು ಹಿಡಿದಿದ್ದಾರೆ.

ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next