Advertisement

Road Mishap; ಆಲಂಕಾರು: ಇಬ್ಬರು ಗಂಭೀರ ಗಾಯ

12:10 AM Apr 01, 2024 | Team Udayavani |

ಆಲಂಕಾರು: ಆಲಂಕಾರು- ಶಾಂತಿಮೊಗರು ರಸ್ತೆಯ ಕಯ್ಯಾಪ್ಪೆಯಲ್ಲಿ ಟೂರಿಸ್ಟ್ ಟೆಂಪೋ ಹಾಗೂ ಸಿಎನ್‌ಜಿ ಸಾಗಾಟದ ವಾಹನದ ನಡುವೆ ಅಪಘಾತ ಸಂಭವಿಸಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

Advertisement

ಕೆಪುಳು ನಿವಾಸಿ ದಿನೇಶ ಹಾಗೂ ಕಾಣಿಯೂರು ನಿವಾಸಿ ಸುನೀಲ್‌ ಗಾಯಗೊಂಡವರು. ದಿನೇಶ್‌ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಸುನಿಲ್‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ.

ಘಟನೆಯಿಂದ ಆಲಂಕಾರು – ಶಾಂತಿಮೊಗರು ರಸ್ತೆಯು 2 ಗಂಟೆ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಪುತ್ತೂರು ಅಗ್ನಿಶಾಮಕ ದಳ ಮತ್ತು ಕಡಬ ಪೊಲೀಸರು ಸ್ಥಳಕ್ಕೆ ಆಗಮಿಸಿ ರಸ್ತೆ ತೆರವುಗೊಳಿಸಿ ಸಂಚಾರ ಮುಕ್ತಗೊಳಿಸಿದರು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next