Advertisement

Road Mishap; ಸಂಪಾಜೆ: ಆಟೋ ರಿಕ್ಷಾ-ಕಾರು ಢಿಕ್ಕಿ, ಚಾಲಕನಿಗೆ ಗಾಯ

11:53 PM Feb 20, 2024 | Team Udayavani |

ಅರಂತೋಡು: ಆಟೋ ಹಾಗೂ ಕಾರಿನ ನಡುವೆ ಮುಖಾಮುಖಿ ಢಿಕ್ಕಿಯಾಗಿ ಆಟೋರಿಕ್ಷಾ ಪಲ್ಟಿಯಾದ ಘಟನೆ ಸಂಪಾಜೆ ಗ್ರಾಮದ ಕೈಪಡ್ಕದಲ್ಲಿ ಸಂಭವಿಸಿದೆ.

Advertisement

ಗಾಯಾಳು ರಿಕ್ಷಾ ಚಾಲಕನನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಪಾಜೆಯಿಂದ ಕಲ್ಲುಗುಂಡಿಗೆ ಬರುತ್ತಿದ್ದ ಸುರೇಶ್‌ ಅವರು ಚಲಾಯಿಸುತ್ತಿದ್ದ ಆಟೋ ರಿಕ್ಷಾಕ್ಕೆ ಮಡಿಕೇರಿಗೆ ತೆರಳುತ್ತಿದ್ದ ಕಾರು ಕೈಪಡ್ಕದಲ್ಲಿ ಢಿಕ್ಕಿ ಹೊಡೆದಿತ್ತು. ಈ ಘಟನೆಯಿಂದ ಆಟೋ ರಿಕ್ಷಾ ಪಲ್ಟಿಯಾಗಿ, ಚಾಲಕನಿಗೆ ಗಾಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next