Advertisement

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

08:42 PM Apr 16, 2024 | Team Udayavani |

ಸಿದ್ದಾಪುರ: ಬೆಂಗಳೂರಿನಿಂದ ಕುಟುಂಬ ಸಮೇತರಾಗಿ ಕುಂದಾಪುರ ತಾಲೂಕಿನ ಮತ್ಯಾಡಿ ಗ್ರಾಮಕ್ಕೆ ಬರುತ್ತಿದ್ದ ಕಾರೊಂದು ಎ.15ರಂದು ಹೈಕಾಡಿ ಬಳಿ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಹಲವು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

Advertisement

ಮತ್ಯಾಡಿ ಗ್ರಾಮದವರಾದ ಶ್ರುತಿ (30), ಅವರ ಪತಿ ಸಂತೋಷ್‌, ಮಕ್ಕಳಾದ ಸದ್ಭವ (6), ಸುದೀಕ್ಷಾ (13) ಹಾಗೂ ಮೈದುನ ಚರಣ್‌ ಶೆಟ್ಟಿ(30) ಅವರು ಎ.15ರಂದು ಬೆಂಗಳೂರಿನಿಂದ ಊರಿಗೆ ಕಾರಿನಲ್ಲಿ ಹೊರಟ್ಟಿದ್ದರು. ಸಂತೋಷ್‌ ಕಾರು ಚಲಾಯಿಸುತ್ತಿದ್ದರು. ಹೈಕಾಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿತ್ತು.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಶ್ರುತಿ, ಸದ್ಭವ ಅವರು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂತೋಷ್‌ ಮತ್ತು ಸುದೀಕ್ಷಾ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚರಣ್‌ ಗಾಯಗಳಿಲ್ಲದೇ ಪಾರಾಗಿದ್ದಾರೆ. ಶ್ರುತಿ ಅವರು ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next