ಬೆಳ್ತಂಗಡಿ: ಧರ್ಮಸ್ಥಳದ ಕುದ್ರಾಯದಲ್ಲಿ ಬುಧವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಏಳು ಮಂದಿ ಗಂಭೀರ ಗಾಯಗೊಂಡು ಘಟನೆ ಸಂಭವಿಸಿದೆ.
ಮಂಡ್ಯ ಚೆನ್ನಸಾಂದ್ರದ ಮಹಾದೇವ (63) ಸಾವನ್ನಪ್ಪಿದವರು.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಗಮಿಸುತ್ತಿದ್ದ ಮಂಡ್ಯದ 10 ಮಂದಿಯ ಕುಟುಂಬ ನಿಡ್ಲೆ ಗ್ರಾಮದ ಕುದ್ರಾಯದಲ್ಲಿ ಬೊಲೇರೋ ವಾಹನವನ್ನು ರಸ್ತೆಯ ಬಲ ಭಾಗದಲ್ಲಿ ನಿಲ್ಲಿಸಿ ಇಳಿದು ಅಂಗಡಿಗೆ ಹೋಗುತ್ತಿದ್ದರು. ಈ ವೇಳೆ ಧರ್ಮಸ್ಥಳ ಡಿಪೋದಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನಿಂತಿದ್ದವರಿಗೆ ಹಾಗೂ ಬೊಲೊರೊ ವಾಹನಕ್ಕೆ ಢಿಕ್ಕಿ ಹೊಡೆಯಿತು.
ಐವರು ಮಹಿಳೆಯರು, ಓರ್ವ ಪುರುಷ, ಒಂದು ಮಗುವಿಗೆ ಗಂಭೀರ ಗಾಯವಾಗಿದ್ದು ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖ ಲಿಸಲಾಗಿದೆ. ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
ಮುಳುವಾಗುತ್ತಿದೆ ಹೆದ್ದಾರಿ ಅಂಗಡಿ
ರಾಜ್ಯ ಹೆದ್ದಾರಿ ಬದಿಯಲ್ಲಿ ಹಲವಾರು ಅನುಮತಿರಹಿತ ಅಂಗಡಿ ಗಳು ತಲೆಯೆತ್ತಿವೆ. ಈ ಕುರಿತು ಸಾಕಷ್ಟು ಬಾರಿ ಹೆದ್ದಾರಿ ಇಲಾಖೆಯ ಗಮನಕ್ಕೆ ತಂದರೂ ನಿರ್ಲಕ್ಷ್ಯ ತೋರುತ್ತಿದೆ. ಪ್ರಯಾಣಿಕರು ಅಂಗಡಿ ಗಳ ಮುಂಭಾಗ ವಾಹನ ನಿಲ್ಲಿಸುವುದರಿಂದ ಅಪಘಾತ ಸಂಭ ವಿಸುತ್ತಿವೆ. ಬುಧವಾರವೂ ಅಂಥದ್ದೇ ಘಟನೆ ಸಂಭವಿಸಿದೆ. ಈ ಕುರಿತು ಜಿಲ್ಲಾಧಿಕಾರಿ ರವಿಕುಮಾರ್ ಅವರಲ್ಲಿ ಉದಯವಾಣಿ ಪ್ರಶ್ನಿಸಿದಾಗ ಗುರುವಾರವೇ ತಹಶೀಲ್ದಾರ್, ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಧರ್ಮಸ್ಥಳದಿಂದ ಪೆರಿಯಶಾಂತಿ ಸಹಿತ ಹೆದ್ದಾರಿ ಬದಿಯ ಅಂಗಡಿಗಳನ್ನು ತೆರವು ಮಾಡಲಾಗುವುದು ಎಂದು ತಿಳಿಸಿದ್ದಾರೆ.