Advertisement

ಟೋಲ್ ಗೇಟ್ ಗೆ ಮಿನಿ ಲಾರಿ ಡಿಕ್ಕಿ :ಸಿನಿಮಿಯ ರೀತಿಯಲ್ಲಿ ಪಾರಾದ ಚಾಲಕ ಮತ್ತು ಟೋಲ್ ಸಿಬ್ಬಂದಿ

05:20 PM Oct 03, 2021 | Team Udayavani |

ಚಿಕ್ಕೋಡಿ : ನಿಪ್ಪಾಣಿ – ಮುಧೋಳ ರಾಜ್ಯ ಹೆದ್ದಾರಿಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಟೋಲ್ ಗೇಟಿಗೆ ಮಿನಿ ಲಾರಿ ಡಿಕ್ಕಿ ಹೊಡೆದಿದ್ದು ಸಿನಿಮೀಯ ರೀತಿಯಲ್ಲಿ ಚಾಲಕ ಮತ್ತು ಟೋಲ್ ಸಿಬ್ಬಂದಿಗಳು ಪಾರಾಗಿರುವ ಘಟನೆ ಭಾನುವಾರ ಸಂಭವಿಸಿದೆ.

Advertisement

ಮಿನಿ ಲಾರಿ ಚಿಕ್ಕೋಡಿ ನಗರದ್ದು ಎಂದು ತಿಳಿದು ಬಂದಿದ್ದು. ಲಾರಿ ಚಾಲಕ ಉದಯ ಕುಂಬಾರ ಸೇರಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಎಂಸ್ಯಾಂಡ್ ತುಂಬಿಕೊಂಡು ಅತೀ ವೇಗವಾಗಿ ಹೋಗುತ್ತಿದ್ದ ಮಿನಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಟೋಲಗೇಟ್ ಗೆ ಡಿಕ್ಕಿ ಹೊಡೆದಿದೆ ಎಂಬುದು ಸ್ಥಳಿಯರು ಹೇಳಿದ್ದಾರೆ.

ಅಪಘಾತದ ರಭಸಕ್ಕೆ ಮಿನಿ ಲಾರಿ ನುಜ್ಜುಗುಜ್ಜಾಗಿದೆ. ಟೋಲ್ ಗೇಟಿಗೂ ಹಾನಿಯಾಗಿದೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ :ಕ್ರೂಸ್ ಶಿಪ್ ನಲ್ಲಿ ರೇವ್ ಪಾರ್ಟಿ ಪ್ರಕರಣ: ಶಾರುಖ್ ಪುತ್ರ ಸೇರಿ ಮೂವರ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next