Advertisement

Road Mishap ಆಟೋ ರಿಕ್ಷಾ-ಕಾರು ಡಿಕ್ಕಿ; ಓರ್ವ ಮಹಿಳೆ‌ ಸಾವು; ನಾಲ್ವರಿಗೆ ಗಾಯ

08:57 PM Nov 14, 2023 | Team Udayavani |

ಶಿರಸಿ: ತಾಲೂಕಿನ ಯಡಳ್ಳಿ ಸಮೀಪ ಆಟೋ ರಿಕ್ಷಾ ಹಾಗೂ ಕಾರಿನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ  ಓರ್ವ ಮಹಿಳೆ‌ ಮೃತಪಟ್ಟಿದ್ದು ,ನಾಲ್ವರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.

Advertisement

ಅಂಬಾಗಿರಿಯ ವಿಶಾಲಾಕ್ಷಿ ಹೆಗಡೆ (55) ಮೃತ ಮಹಿಳೆ. ಆಟೋ ರಿಕ್ಷಾದಲ್ಲಿದ್ದ ಆಶೋಕ ಶಿರಾಲಿ (52) ನಿಲೇಕಣಿ, ತ್ರೀಶಾ ಅಶೋಕ ಶಿರಾಲಿ (9), ಅನಿತಾ ಅಶೋಕ ಶಿರಾಲಿ (40) ,ಆದರ್ಶ ಅಶೋಕ ಶಿರಾಲಿ (18) ಹಾಗೂ ಅಪರಂಜಿತ (45) ಗಾಯಗೊಂಡವರಾಗಿದ್ದಾರೆ.

ಕಾರು ಶಿವಮೊಗ್ಗದವರದ್ದಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ .ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next