Advertisement

Padubidri: ರಸ್ತೆ ದಾಟುತ್ತಿದ್ದ ವೇಳೆ ಸ್ಕೂಟರ್‌ ಢಿಕ್ಕಿ… ಮಹಿಳೆಗೆ ಗಾಯ

06:09 PM Nov 01, 2024 | Team Udayavani |

ಪಡುಬಿದ್ರಿ: ರಸ್ತೆ ದಾಟುತ್ತಿದ್ದ ವೇಳೆ ಸ್ಕೂಟರೊಂದು ಡಿಕ್ಕಿ ಹೊಡೆದು ಮಹಿಳೆ ಗಾಯಗೊಂಡಿರುವ ಘಟನೆ ಗುರುವಾರ(ನ.೧) ಬೆಳಿಗ್ಗೆ ನಡೆದಿದೆ.

Advertisement

ಬೀಫಾತಿಮಾ(65) ಗಾಯಗೊಂಡ ಮಹಿಳೆ.

ಶುಕ್ರವಾರ ಬೆಳಿಗ್ಗಿನ 10 ಗಂಟೆಯ ಸುಮಾರಿಗೆ ಬೀಫಾತಿಮಾ ಅವರು ಕಾರ್ಕಳದಿಂದ ಕಂಚಿನಡ್ಕದ ತಮ್ಮ ಸಂಬಂಧಿಕರ ಮನೆಗೆ ಬಂದು ವಾಪಾಸಾಗಲು ಪಡುಬಿದ್ರಿಯ ಮುಖ್ಯ ಜಂಕ್ಷನ್‌ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಪಡುಬಿದ್ರಿ ಜುಮ್ಮಾ ಮಸೀದಿ ಕಡೆಯಿಂದ ಸರ್ಫರಾಜ್ ಎಂಬಾತ ಅತಿವೇಗ ಹಾಗೂ ಅಜಾಗರೂಕತೆಯಿಂದ ಸ್ಕೂಟರನ್ನು ಮಹಿಳೆಗೆ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಮಹಿಳೆಗೆ ಗಾಯವಾಗಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Anandapura: ಬಟ್ಟೆ ತೊಳೆಯಲು ಹೋದ ಮಹಿಳೆ ಕೆರೆಗೆ ಬಿದ್ದು ಮೃತ್ಯು

Advertisement
Advertisement

Udayavani is now on Telegram. Click here to join our channel and stay updated with the latest news.

Next