Advertisement

Kushtagi: ಲಾರಿಗೆ ಡಿಕ್ಕಿ ಹೊಡೆದ ಬಸ್… ಓರ್ವ ಸ್ಥಳದಲ್ಲೇ ಮೃತ್ಯು, 6 ಮಂದಿಗೆ ಗಾಯ

10:18 AM Aug 20, 2024 | Team Udayavani |

ಕುಷ್ಟಗಿ: ಕುಷ್ಟಗಿ ತಾಲೂಕಿನ ಕುರಬನಾಳ ರಾಷ್ಟ್ರೀಯ ಚತುಷ್ಪಥ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ಸ್ಲೀಪರ್ ಕೋಚ್ ಬಸ್, ಚಲಿಸುವ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟು, 6 ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.

Advertisement

ತಮಿಳುನಾಡು ಮೂಲದ ನಟೇಶನ್ ಮೃತ ದುರ್ದೈವಿ.

ಕುಷ್ಟಗಿ-ಹೊಸಪೇಟೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕುರಬನಾಳ ಸಮೀಪ ಬೆಂಗಳೂರಿನಿಂದ ಗೋವಕ್ಕೆ ಹೊರಟಿದ್ದ ಬಸ್ಸು, ಮುಂದೆ ಸಾಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಸ್ಲೀಪರ್ ಕೋಚ್ ಬಸ್ ಚಾಲಕನ ಓವರ್ ಸ್ಪೀಡ್ ಹಾಗೂ ನಿದ್ದೆಯ ಮಂಪರಿನಲ್ಲಿ ಲಾರಿಗೆ ರಭಸವಾಗಿ ಡಿಕ್ಕಿ ಹೊಡೆದಿರುವುದೇ ಕಾರಣ ಎನ್ನಲಾಗುತ್ತಿದೆ. ಡಿಕ್ಕಿಯ ರಭಸಕ್ಕೆ ಬಸ್ಸಿನ ಎಡ ಭಾಗದ ಮುಂಭಾಗ ಭಾಗಶಃ ನಜ್ಜು ಗುಜ್ಜಾಗಿದೆ.

ಬಸ್ಸಿನಲ್ಲಿದ್ದ ಇಬ್ಬರು ಮಹಿಳೆಯರು, ನಾಲ್ಬರು ಪುರುಷರಿಗೆ ಗಾಯವಾಗಿದ್ದು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಘಟನಾ ಸ್ಥಳಕ್ಕೆ ಪಿಎಸೈ ಹನಮಂತಪ್ಪ ತಳವಾರ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Advertisement

ಇದನ್ನೂ ಓದಿ: Vijayapura: ನಾಗರದಿನ್ನಿ ಪರಿಸರದಲ್ಲಿ ಚಿರತೆ ಮರಿಗಳು ಪ್ರತ್ಯಕ್ಷ… CCTV ಯಲ್ಲಿ ಸೆರೆ

Advertisement

Udayavani is now on Telegram. Click here to join our channel and stay updated with the latest news.