Advertisement

Hubballi: ಭೀಕರ ಅಪಘಾತ… ದ್ವಿಚಕ್ರ ವಾಹನ ಸವಾರರು ಸ್ಥಳದಲ್ಲೇ ಮೃತ್ಯು, ದೇಹಗಳು ಛಿದ್ರ

01:05 PM Oct 15, 2024 | Team Udayavani |

ಹುಬ್ಬಳ್ಳಿ: ದ್ವಿಚಕ್ರ ವಾಹನಕ್ಕೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಎರಡು ದೇಹಗಳು ಛಿದ್ರಗೊಂಡ ಘಟನೆ ನಗರದ ಹೊರವಲಯದ ಗೋಕುಲ ಗ್ರಾಮದ ಧಾರಾವತಿ ಹನುಮಂತ ದೇವಸ್ಥಾನ ಬಳಿಯ ಬೈಪಾಸ್‌ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

Advertisement

ಅವಘಡದಲ್ಲಿ ಬೆಂಗಳೂರಿನ ಗೋಪಾಲಕೃಷ್ಣ ಉಪಾಧ್ಯಾಯ (52) ಹಾಗೂ ಧಾರವಾಡದ ಸದಾನಂದ ದೇವಾಡಿಗ (48) ಮೃತಪಟ್ಟಿದ್ದಾರೆ.

ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದುಕೊಂಡು ಹೋಗಿದೆ. ನಂತರ ಇನ್ನೊಂದು ವಾಹನ ಇವರ ಮೇಲೆ ಹಾಯ್ದ ಪರಿಣಾಮ ಸವಾರರಿಬ್ಬರ ದೇಹಗಳು ಛಿದ್ರವಾಗಿವೆ. ಸ್ಥಳಕ್ಕೆ ಉತ್ತರ ಸಂಚಾರ ಠಾಣೆ ಪೊಲೀಸರು ಭೇಟಿಕೊಟ್ಟು ದೇಹಗಳನ್ನು ಕೆಎಂಸಿಆರ್‌ಐ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ.

ಇದನ್ನೂ ಓದಿ: Miraculous Escape: ಮೈಮೇಲೆ ವಾಟರ್ ಟ್ಯಾಂಕ್ ಬಿದ್ದರೂ ಮಹಿಳೆ ಪಾರಾಗಿದ್ದೇ ಪವಾಡ…

Advertisement

Udayavani is now on Telegram. Click here to join our channel and stay updated with the latest news.

Next