Advertisement

“ರಸ್ತೆ ಅವಘಡದ ದುರ್ದೈವಿಗಳು ಯುವಕರು’

12:30 AM Feb 05, 2019 | |

ಉಡುಪಿ: ವಿಶ್ವದಲ್ಲಿ ಪ್ರತಿ ವರ್ಷ 1.34 ಮಿಲಿಯನ್‌ ಜನರು ರಸ್ತೆ ಅಪಘಾತಗಳ‌ಲ್ಲಿ ಮೃತರಾಗುತ್ತಿದ್ದಾರೆ. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮುದಾಯದವರು ಇದ್ದಾರೆ ಎಂದು ಜಿಲ್ಲಾ  ಹಿರಿಯ ಪ್ರಾದೇಶಿಕ ಅಧಿಕಾರಿ ಆರ್‌. ಎಂ. ವರ್ಣೇಕರ್‌ ಆತಂಕ ವ್ಯಕ್ತಪಡಿಸಿದರು.

Advertisement

ಜಿಲ್ಲಾಡಳಿತ, ಸಾರಿಗೆ ಇಲಾಖೆ ಮತ್ತು ಪೊಲೀಸ್‌ ಇಲಾಖೆಯ ಸಹಯೋಗದಲ್ಲಿ ಸೋಮವಾರ ಮಣಿಪಾಲದ ಆರ್‌ಟಿಒ ಕಚೇರಿಯಲ್ಲಿ ಆಯೋಜಿಸಿದ್ದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಪಘಾತಗಳ ಸಂಖ್ಯೆ ಹೆಚ್ಚಾಗಿ, ನಿತ್ಯ ಸಾವು- ನೋವು ಸಂಭವಿಸುತ್ತಿವೆ. ಇವುಗಳನ್ನು ತಪ್ಪಿಸಬೇಕಾದರೆ ಪ್ರತಿಯೊಬ್ಬ ವಾಹನ ಸವಾರರು ರಸ್ತೆ ನಿಯಮಗಳನ್ನು ಪಾಲಿಸಬೇಕು. ವಾಹನದ ಪರವಾನಿಗೆ ಹೊಂದಿರಬೇಕು. ರಸ್ತೆ ಟ್ರಾಫಿಕ್‌ ಸಿಗ್ನಲ್‌ಗ‌ಳ ಬಗ್ಗೆ ಮಾಹಿತಿ ಪಡೆದಿರಬೇಕು. ವಾಹನಗಳನ್ನು ಪಾರ್ಕಿಂಗ್‌ ಮಾಡು ವಾಗ ಸಾರ್ವಜನಿಕರಿಗೆ ತೊಂದರೆ ಯಾಗದ ರೀತಿಯಲ್ಲಿ  ನಿಲುಗಡೆ ಮಾಡ ಬೇಕು ಎಂದು ಮಾಹಿತಿ ನೀಡಿದರು.

ಅಪಘಾತಗಳನ್ನು ನಿಯಂತ್ರಿಸಲು ಇಲಾಖೆ ಪ್ರತಿವರ್ಷ ಒಂದು ವಾರದ ಕಾಲ ಸಪ್ತಾಹ ಏರ್ಪಡಿಸುತ್ತದೆ. ಆ ಮೂಲಕ ಜನರಲ್ಲಿ ರಸ್ತೆ ಸುರಕ್ಷತೆಯ ಅರಿವು ಮೂಡಿಸಲಾಗುತ್ತಿದೆ ಎಂದರು.

ಸಪ್ತಾಹದ ಕೈಪಿಡಿಯನ್ನು ಬಿಡುಗಡೆ ಮಾಡಿದ ಮಣಿಪಾಲದ ಉಪವೃತ್ತ ನಿರೀಕ್ಷಕ ಮಂಜುನಾಥ, ಸಂಚಾರಿ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿದರೆ ಅಪಘಾತ ಸಂಭವಿಸುವುದು ಅತಿ ವಿರಳ. ಅನಾವಶ್ಯಕವಾಗಿ ಅವಸರ ಮಾಡಿ ಮುಂದಿನ ವಾಹನವನ್ನು ಹಿಂದಿಕ್ಕಲು ಹೋಗಿ ಅಪಘಾತ ಆಗುತ್ತದೆ. ತುಸು ನಿರ್ಲಕ್ಷ್ಯ ವಹಿಸಿದರೆ ಮತ್ತೂಬ್ಬರ ಜೀವ ತೆಗೆದುಕೊಳ್ಳುತ್ತದೆ ಎಂಬುವುದು ಎಲ್ಲರಿಗೂ ಅರಿವು ಹೊಂದಿರಬೇಕು  ಹೇಳಿದರು.

ಮುಂದಿನ ಆರು ದಿನಗಳ ರಸ್ತೆ ಸುರಕ್ಷಾ ಕಾರ್ಯಕ್ರಮದ ಅಂಗವಾಗಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ.ಉಪ ಸಾರಿಗೆ ಅಧಿಕಾರಿ ರಾಮಕೃಷ್ಣ, ಉಡುಪಿ ಸಂಚಾರಿ ಠಾಣೆಯ ಅರಕ್ಷಕ ನಿರೀಕ್ಷಕ ನಾರಾಯಣ ಉಪಸ್ಥಿತರಿದ್ದರು. ಶಶಿಧರ್‌ ಸ್ವಾಗತಿಸಿದರು. ಕುಮಾರ್‌  ವಂದಿಸಿದರು. 

Advertisement

ವಿದ್ಯಾಸಂಸ್ಥೆಗಳಲ್ಲಿ ಜಾಗೃತಿ
ಕಳೆದ ನಾಲ್ಕು  ವರ್ಷಗಳಿಂದ ಉಡುಪಿ ಜಿಲ್ಲೆಯ ವಿವಿಧ ಶಾಲೆ ಹಾಗೂ ಕಾಲೇಜುಗಳಿಗೆ ತೆರಳಿ ಸುಮಾರು 1ಲಕ್ಷ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ರಸ್ತೆ ಅಪಘಾತ, ಸಂಚಾರಿ ನಿಯಮಗಳ ಪಾಲನೆ, ಸಂಕೇತಗಳನ್ನು ವಿವರಿಸುವ ವಿಡಿಯೋ ಚಿತ್ರದ ತುಣುಕು ಗಳನ್ನು ಪ್ರದರ್ಶಿಸ ಲಾಗುತ್ತದೆ. ಅಲ್ಲದೆ ರಸ್ತೆ ಸುರಕ್ಷಾ ನಿಯಮ ಪಾಲನೆ ಬಗ್ಗೆ  ವಿಶೇಷ ಕಾರ್ಯಾ ಗಾರ ಏರ್ಪಡಿಸಲಾಗಿದೆ ಎಂದು ಮಂಜುನಾಥ ತಿಳಿಸಿದರು.

ರಸ್ತೆ ಅವಘಡದ ಸಾವು ಇಳಿಕೆ
ಜನರಲ್ಲಿ ಇದೀಗ ರಸ್ತೆ ಸುರಕ್ಷಾ ಸಪ್ತಾಹ ಅರಿವು ಮೂಡಿಸುತ್ತಿದೆ. ದೇಶದಲ್ಲಿ 2016ರಲ್ಲಿ 1.54 ಲಕ್ಷ ಜನರು ರಸ್ತೆ ಅಪಘಾತದಲ್ಲಿ  ಮೃತಪಟ್ಟರೆ, 2017ರಲ್ಲಿ  1.46 ಲಕ್ಷ ಹಾಗೂ 2018ರಲ್ಲಿ 1.18 ಲಕ್ಷ  ಮೃತಪಟ್ಟಿದ್ದಾರೆ.
– ಮಂಜುನಾಥ,ಉಪ ವೃತ್ತ ನಿರೀಕ್ಷಕರು, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next