Advertisement

ಪಟ್ಟನಾಯಕನಹಳ್ಳಿ ಬಸ್‌ ನಿಲ್ದಾಣದ ರಸ್ತೆ ಅವ್ಯವಸ್ಥೆ

04:17 PM Dec 28, 2019 | Suhan S |

ಶಿರಾ: ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಬಸ್‌ ನಿಲ್ದಾಣದ ರಸ್ತೆ ಅಭಿವೃದ್ಧಿ ಕಾಮಗಾರಿ ಅನುಮೋದನೆಯಾಗಿ ಒಂದು ವರ್ಷ ಕಳೆದರೂ ನನೆಗುದಿಗೆ ಬಿದ್ದಿದೆ.

Advertisement

ತಾಲೂಕಿನ ಪಟ್ಟನಾಯಕನಹಳ್ಳಿ ಐತಿಹಾಸಿಕ ಪ್ರಸಿದ್ಧ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನ ಮಠಕ್ಕೆ ಬರುವ ಭಕ್ತರು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ 11 ಕೋಟಿ ಮತ್ತು 8 ಕೋಟಿ ಪ್ರತ್ಯೇಕ ಕಾಮಗಾರಿಗೆ ಮಂಜೂರಾತಿ ನೀಡಿತ್ತು. ಆದರೆ ವರ್ಷ ಕಳೆದರೂ ರಸ್ತೆ ಕಾಮಗಾರಿ ನಡೆದಿಲ್ಲ. ಬಾಕ್ಸ್‌ ಚರಂಡಿ ನಿರ್ಮಿಸಿ ಹಳೆಯ ಡಾಂಬರ್‌ ರಸ್ತೆ ಹಾಳು ಮಾಡಲಾಗಿದೆ. ಇದರಿಂದ ಸ್ಥಳೀಯರು ದೂಳಿನ ಸಮಸ್ಯೆ ಅನುಭವಿಸಬೇಕಾಗಿದೆ.

ಕಾಣೆಯಾದ ಗುತ್ತಿಗೆದಾರ: 2018ರಲ್ಲಿ ಪಟ್ಟನಾಯಕನಹಳ್ಳಿ ಬಸ್‌ ನಿಲ್ದಾಣದ 150 ಮೀಟರ್‌ ರಸ್ತೆ ಕಾಮಗಾರಿಗೆ 1 ಕೋಟಿ ರೂ. ಮಂಜೂರಾಗಿತ್ತು. ಅದರಂತೆ ಕಾಮಗಾರಿ ಆರಂಭಿಸಿದ ಗುತ್ತಿಗೆದಾರ ಹಳೆ ರಸ್ತೆ ತೆಗೆದು ರಸ್ತೆಯ ಅಕ್ಕ ಪಕ್ಕ ಬಾಕ್ಸ್‌ ಚರಂಡಿ ಕಾಮಗಾರಿ ಮುಗಿಸಿ ಹಿಂದೆ ಇದ್ದ ಡಾಂಬರ್‌ ರಸ್ತೆ ಕಿತ್ತು ಹಾಕಿಸಿದ್ದಾನೆ. ಶೀಘ್ರ ಡಾಂಬರಿಕರಣ ಕಾಮಗಾರಿ ಮುಗಿಸುತ್ತೇವೆ ಎಂದು ಹೇಳಿ ಹೋದ ಗುತ್ತಿಗೆದಾರ ವರ್ಷ ಕಳೆದರೂ ಇತ್ತ ಸುಳಿದಿಲ್ಲ. ಇದೀದ ರಸ್ತೆ ಸಂಪೂರ್ಣ ಮಣ್ಣಿನ ರಸ್ತೆಯಾಗಿದ್ದು, ವಾಹನಗಳು ಸಂಚರಿಸಿದರೆ ದೂಳಿನ ಅಭಿಷೇಕವಾಗುತ್ತದೆ. ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು, ಅಸ್ಪತ್ರೆಗೆ ಬರುವಂತ ವೃದ್ಧರು, ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿದೆ.

2019ರ ನವೆಂಬರ್‌ನಲ್ಲಿ ಪಟ್ಟನಾಯಕನಹಳ್ಳಿಯಿಂದ ಉದ್ದರಾಮನಹಳ್ಳಿ ಕ್ರಾಸ್‌ವರೆಗೆ 8 ಕೋಟಿ ರೂ. ವೆಚ್ಚದ ಕಾಮಗಾರಿಯೂ ಕಳಪೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. ಇಷ್ಟಾದರೂ ನಿರ್ಲಕ್ಷ್ಯ ವಹಿಸಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಡೆ ಸಾರ್ವಜನಿಕರ ಅನುಮಾನಗಳಿಗೆ ಕಾರಣವಾಗಿದೆ. ತಕ್ಷಣ ಬಸ್‌ ನಿಲ್ದಾಣ ರಸ್ತೆಗೆ ಡಾಂಬರೀಕರಣ ಮಾಡುವ ಮೂಲಕ ದೂಳಿನಿಂದ ರಕ್ಷಿಸುವಂತೆ ಸಾರ್ವಜನಿಕರು ಅಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next