Advertisement

Movie review: ಒಂದು ಪ್ರೀತಿಯ ಸುತ್ತ ರೋಡ್ ಕಿಂಗ್

03:49 PM Jun 24, 2023 | Team Udayavani |

ತನ್ನದೇ ಲೋಕದಲ್ಲಿ ಜಾಲಿಯಾಗಿ ಸುತ್ತಾಡಿಕೊಂಡಿರುವ ಹುಡುಗನ ಲೈಫ್ನಲ್ಲಿ ಬರುವ ಹುಡುಗಿ, ಅಲ್ಲಿಂದ ಪ್ರೀತಿ, ಪ್ರೇಮ, ಪ್ರಣಯ… ಜೊತೆಗೆ ಜಾಲಿರೈಡ್‌… ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ ಎನ್ನುವಷ್ಟರಲ್ಲಿ ದೊಡ್ಡದೊಂದು ಅಘಾತ… ಅಲ್ಲಿಂದ ಬದಲಾಗುತ್ತಾ ಹೋಗುವ ಸನ್ನಿವೇಶಗಳು… ಇದು ಈ ವಾರ ತೆರೆಕಂಡಿರುವ “ರೋಡ್‌ಕಿಂಗ್‌’ ಚಿತ್ರದ ಒನ್‌ಲೈನ್‌.

Advertisement

ಅಂದಹಾಗೆ, “ರೋಡ್‌ಕಿಂಗ್‌’ ಒಂದು ಲವ್‌ಸ್ಟೋರಿ ಇರುವ ಸಿನಿಮಾ. ತನಗೆ ಗೊತ್ತಿಲ್ಲದಂತೆ ಪ್ರೀತಿಯಲ್ಲಿ ಬೀಳುವ ನಾಯಕ ಮುಂದೆ ಅನುಭವಿಸುವ “ಯಾತನೆ-ವೇದನೆ’ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಇದು ಲವ್‌ ಸ್ಟೋರಿಯಾದರೂ ಆರಂಭದಲ್ಲಿ ಜಾಲಿರೈಡ್‌ ಆಗಿಯೇ ಸಾಗುತ್ತದೆ. ಫ್ರೆಂಡ್ಸ್‌, ಅವರ ಲವ್‌ಸ್ಟೋರಿ, ಜಾಲಿರೈಡ್‌, ಪಾರ್ಟಿ, ಪಬ್‌ ಕುಣಿತ.. ಹೀಗೆ ಸಾಗುವ ಸಿನಿಮಾ ನಿಧಾನವಾಗಿ ಲವ್‌ಸ್ಟೋರಿಯಾಗಿ ಬದಲಾಗುತ್ತದೆ.

ಅಂದಹಾಗೆ, ಈ ಚಿತ್ರವನ್ನು ಸ್ಕೈಪ್‌ ಮೂಲಕ ನಿರ್ದೇಶಿಸಲಾಗಿದೆ. ದೂರದ ಅಮೆರಿಕಾದಿಂದ ನಿರ್ದೇಶಕ ರಾಂಡಿ ಕೆಂಟ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಒಂದು ಲವ್‌ಸ್ಟೋರಿಯಾಗಿ ತಕ್ಕಮಟ್ಟಿಗೆ ಮೆಚ್ಚುಗೆ ಪಡೆಯುವ ಸಿನಿಮಾ ತಾಂತ್ರಿಕವಾಗಿ ಇನ್ನಷ್ಟು ಅಪ್‌ಡೇಟ್‌ ಆಗಬೇಕಿತ್ತು. ಚಿತ್ರದಲ್ಲಿ ಮತೀನ್‌ ಹುಸೇನ್‌ ನಾಯಕರಾಗಿ ನಟಿಸಿದ್ದು, ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ನಾಯಕಿಯಾಗಿ ರುಕ್ಸರ್‌ ನಟಿಸಿದ್ದಾರೆ. ಉಳಿದಂತೆ ಲೀಲಾ ಮೋಹನ್‌, ಹರೀಶ್‌ ಸೆಜೆಕೆನ್‌, ನಯನಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next