ಹುಳಿಯಾರು: ಹುಳಿಯಾರು ಪಟ್ಟಣಕ್ಕೆ ಬರುವಪ್ರತಿಯೊಬ್ಬರಿಗೂ ಧೂಳಿನ ಮಜ್ಜನ ನಿಶ್ವಿತ.ಹೊಸದುರ್ಗ, ತಿಪಟೂರು ಕಡೆಯಿಂದ ಬಂದರೂಧೂಳಿನ ಸ್ನಾನ ಮಾಡಬೇಕು. ಶಿರಾ, ಚಿಕ್ಕನಾಯಕನಹಳ್ಳಿ ಕಡೆಯಿಂದ ಬಂದರೂ ಧೂಳಿನ ಅಭಿಷೇಕಸ್ವೀಕರಿಸಬೇಕು. ಪಟ್ಟಣದ ರಾಮಗೋಪಾಲ್‌ಸರ್ಕಲ್‌ನಲ್ಲಿ ತಿರುಗಾಡಿದರೂ ಧೂಳಿನ ಸಿಂಚನಮಾಡಿಸಿಕೊಳ್ಳಬೇಕು.
ಹೌದು, ಮಂಗಳೂರು ವಿಶಾಖಪಟ್ಟಣರಾಷ್ಟ್ರೀಯ ಹೆದ್ದಾರಿ 234 ರ ಹುಳಿಯಾರು ಭಾಗದವಿಸ್ತರಣೆಯ ಕಾಮಗಾರಿಯು ಕಳೆದ 3ವರ್ಷಗಳಿಂದ ನಡೆಯುತ್ತಿದೆ. ಆಮೆ ಗತಿಯಲ್ಲಿನಡೆಯುತ್ತಿರುವ ಕಾಮಗಾರಿಯಿಂದ ಏಳುತ್ತಿರುವಧೂಳು ಪಟ್ಟಣಕ್ಕೆ ಬರುವವರಿಗೆ ಕಿರಿಕಿರಿಮಾಡುತ್ತಿದೆ. ಜೊತೆಗೆ ಆರೋ ಗ್ಯದ ಮೇಲೆದುಷ್ಪರಿಣಾಮ ಬೀರುವ ಆತಂಕಕ್ಕೆ ಕಾರಣವಾಗಿದ್ದು,ಸಾರ್ವಜನಿಕರು ಹಿಡಿಶಾಪ ಹಾಕುತ್ತಾ ಸಂಚರಿಸುವಸ್ಥಿತಿ ನಿರ್ಮಾಣವಾಗಿದೆ.
2017 ಡಿಸೆಂಬರ್ ತಿಂಗಳಿನಲ್ಲಿ 234ರಶಿರಾ-ಹುಳಿಯಾರು ಹೆದ್ದಾರಿ ಕಾಮಗಾರಿ ಆರಂಭಗೊಂಡಿತು. ಶಿರಾದಿಂದ ಹುಳಿಯಾರಿನವರೆಗೆಭರದಿಂದ ನಡೆದ ಕಾಮಗಾರಿಯು ಹುಳಿಯಾರುಪ್ರವೇಶಿಸಿದ ಮೇಲೆ ಆಮೆ ವೇಗ ಪಡೆಯಿತು.2018ರ ಅಕ್ಟೋಬರ್ ಮಾಹೆಗೆ ಆರಂಭವಾದಕಾಮಗಾರಿಯು ಇಲ್ಲಿಯವರೆಗೆ ಕೊನೆಗಂಡಿಲ್ಲ.
4ತಿಂಗಳಿಂದ ಕಾಮಗಾರಿ ಸಂಪೂರ್ಣಸ್ಥಗಿತಗೊಂಡಿದ್ದು, ಅರ್ಧಕ್ಕೆ ನಿಂತಿರುವಕಾಮಗಾರಿಯಿಂದ ಕಿರಿ ಕಿರಿ ಹೇಳ ತೀರದಾಗಿದೆ.ಗುತ್ತಿಗೆ ಪಡೆದಿರುವ ಡಿಆರ್‌ಎನ್ ಸಂಸ್ಥೆ ಶಿರಾರಸ್ತೆಯ ಎಸ್‌ಎಲ್‌ಆರ್ ಬಂಕ್ ಬಳಿ ಹಾಗೂತಿಪಟೂರು ರಸ್ತೆಯ ಒಣಕಾಲುವೆ ಬಳಿ ಸರ್ಕಲ್‌ನಿರ್ಮಾಣಕ್ಕೆ ಹಾಗೂ ರಾಂಗೋ ಪಾಲ್ ಸರ್ಕಲ್‌ಬಳಿ ಸೇತುವೆ ನಿರ್ಮಾಣಕ್ಕೆ ಡಾಂಬರ್ ರಸ್ತೆಯನ್ನುಕಿತ್ತು ಜಲ್ಲಿ ಹಾಗೂ ಜಲ್ಲಿಯ ಪುಡಿ ಹಾಕಿ ಹಾಗೆಯೇಬಿಟ್ಟಿರುವುದರಿಂದ ಏಳುತ್ತಿರುವ ಧೂಳುಪ್ರಯಾಣಿಕರ ಗೋಳಿಗೆ ಕಾರಣವಾಗಿದೆ.
ಅನಾರೋಗ್ಯಕ್ಕೆ ತುತ್ತು: ದೂಳು ಏಳಬಾರದೆಂದು ರಸ್ತೆಗೆ ಟ್ಯಾಂಕರ್ ಮೂಲಕ ನೀರನ್ನು ಹಾಕುತ್ತಿದ್ದರೂ ಬಿರುಬಿಸಿಲಿಗೆ ಕ್ಷಣಾರ್ಧದಲ್ಲಿ ನೀರು ಆವಿಯಾಗಿ ಮತ್ತೆಧೂಳು ಏಳುತ್ತದೆ. ಇದರಿಂದ ರಸ್ತೆ ಬದಿಯ ವ್ಯಾಪಾರಿಗಳು ಕಂಗಾಲಾಗಿದ್ದು, ಗೂಡಂಗಡಿಗಳು, ಸಣ್ಣಹೋಟೆಲ್ ವ್ಯಾಪಾರಸ್ಥರು, ಪಾನಿಪೂರಿ, ಎಗ್‌ರೈಸ್,ಜ್ಯೂಸ್, ಕಲ್ಲಂಗಡಿ ಸೇರಿದಂತೆ ಅನೇಕ ವ್ಯಾಪಾರಿಗಳುವ್ಯಾಪಾರ ಮಾಡಲಾಗದೆ ನಷ್ಟ ಅನುಭವಿಸುವಂತಾಗಿದೆ.
ಅಲ್ಲದೆ ಅನಾರೋಗ್ಯಕ್ಕೂ ತುತ್ತಾಗುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಚಿತ್ರದುರ್ಗ ಮತ್ತು ತುಮಕೂರಿನಲ್ಲಿ ಬರುವುದರಿಂದಮತ್ತು ಕೇಂದ್ರ ವ್ಯಾಪ್ತಿಯಲ್ಲಿ ಬರುವುದರಿಂದಸ್ಥಳೀಯ ಜನರು ಕುಂದು ಕೊರತೆ ಗಳನ್ನು ಯಾರಿಗೆಸಲ್ಲಿಸಬೇಕು ಎಂದು ತಿಳಿಯದೇ ತೊಳಲಾಡುತ್ತಾರೆ.ಇನ್ನಾದರೂ ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಧೂಳಿನಿಂದಾಗುತ್ತಿರುವ ಕಿರಿಕಿರಿ ಯಿಂದ ಮುಕ್ತಿಕೊಡುವಂತೆಸಾರ್ವಜನಿಕರು ಒತ್ತಾಯಿಸಿದ್ದಾರೆ.
ಎಚ್.ಬಿ.ಕಿರಣ್ ಕುಮಾರ್