Advertisement
ಅಲ್ಲಾಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಹೊಲದಲ್ಲಿ ಬರುತ್ತದೆ ಎಂದು ಜಮೀನಿನ ಮಾಲೀಕರು ರಸ್ತೆ ಬಂದ್ ಮಾಡಿದ್ದರು. ಇದರಿಂದ ಶಾಲಾ ಮಕ್ಕಳು, ಅನಾರೋಗ್ಯ ಪೀಡಿತರು, ಗ್ರಾಮಸ್ಥರು ಬೇರೆ ಗ್ರಾಮಗಳು, ಶಾಲೆ ಹಾಗೂ ಆಸ್ಪತ್ರೆಗೆ ಹೋಗಬೇಕಾದರೆ ಸುಮಾರು ಎಂಟು ಕಿ.ಮೀ ದೂರದ ಕೋಡ್ಲಿ ಗ್ರಾಮದವರೆಗೆ ನಡೆದುಕೊಂಡೆ ಹೋಗಬೇಕಿತ್ತು. ಆದರೆ ಮಳೆಗಾಲ ಪ್ರಾರಂಭದಲ್ಲಿ ಜೋರಾದ ಮಳೆಗೆ ಹಳ್ಳ ತುಂಬಿ ಹರಿದು ಕಾಲು ದಾರಿಯು ಮುಳುಗಿದ್ದಾಗ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಹಗ್ಗದ ಸಹಾಯದಿಂದ ಅಪಾಯ ಲೆಕ್ಕಿಸದೇ ಹಳ್ಳ ದಾಟಿ ಮನೆಗೆ ತಲುಪಿದ್ದೇವೆ ಎಂದು ಗ್ರಾಮಸ್ಥರು ತಮ್ಮ ಅಳಲು ತೊಡಿಕೊಂಡರು.
Related Articles
Advertisement
ಮಳೆಗಾಲ ಪ್ರಾರಂಭವಾಗಿದ್ದರಿಂದ ಜೋರು ಮಳೆ ಸುರಿದರೆ ಶಾಲೆ ಮಕ್ಕಳು, ಗ್ರಾಮಸ್ಥರು ಬೇರೆ ಗ್ರಾಮಗಳಿಗೆ ಹೋಗಬೇಕಾದರೆ ಹರಿಯುವ ಹಳ್ಳವನ್ನು ಲೆಕ್ಕಿಸದೆ ಜೀವಾಪಾಯದಲ್ಲಿ ದಾಟಿ ಹೋಗಬೇಕಾಗುತ್ತದೆ. ಅಪಾಯ ಸಂಭವಿಸುವ ಮೊದಲೇ ಜಿಲ್ಲಾಧಿಕಾರಿಗಳು ಗಮನಹರಿಸಿ ಶಾಶ್ವತ ಪರಿಹಾರ ಕಲ್ಪಿಸಿ ಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ರಸ್ತೆ ನಿರ್ಮಾಣವಾದ ವಾರದಲ್ಲೇ ಜಮೀನಿನ ಮಾಲೀಕರು ರಸ್ತೆ ಅಗೆದು ಬಂದ್ ಮಾಡಿದ್ದಾರೆ. ಅಲ್ಲದೇ ಗ್ರಾಪಂ ಕುಡಿಯುವ ನೀರಿನ ಬೋರ್‌ವೆಲ್ ಬೀಗ ಹಾಕಿದ್ದರಿಂದ ಅಲ್ಲಾಪುರ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಆಗಿದೆ. ಶೀಘ್ರವೇ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುತ್ತದೆ. -ಶ್ರೀಕಾಂತ ತಾಂಡೂರ. ಅಧ್ಯಕ್ಷರು ಗ್ರಾಪಂ ಕೋಡ್ಲಿ.
ಅಲ್ಲಾಪೂರ ಗ್ರಾಮಕ್ಕೆ ಸಂಪರ್ಕಿಸುವ ಏಕೈಕ ರಸ್ತೆಯನ್ನು ಅಗೆದು ಬಂದ್ ಮಾಡಿದ್ದರಿಂದ ಶಾಲಾ ಮಕ್ಕಳು, ಜನರು ಬೇರೆ ಗ್ರಾಮಗಳಿಗೆ ನಡೆದುಕೊಂಡೆ ಹೋಗುವಂತಾಗಿದೆ. ಜಿಲ್ಲಾಧಿಕಾರಿಗಳು ಗಮನಹರಿಸಿ ಶಾಶ್ವತ ಪರಿಹಾರ ನೀಡಬೇಕು. -ಸಿದ್ದಯ್ಯ ಸ್ವಾಮಿ, ಗ್ರಾಪಂ ಸದಸ್ಯ.